ಬೆಳ್ತಂಗಡಿ: ಗೋಸಮ್ಮಾನ್ ಆಹ್ವಾನ ಅಭಿಯಾನದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಸಹಿ ಸಂಗ್ರಹ ಕಾರ್ಯಕ್ರಮದ ಪೋಸ್ಟರ್ ಅನ್ನು ಪರಮಪೂಜ್ಯ ಕನ್ಯಾಡಿ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಬಿಡುಗಡೆಗೊಳಿಸಲಾಯಿತು.

ಬೆಳ್ತಂಗಡಿ ತಾಲೂಕು ಅಭಿಯಾನ ಸಂಯೋಜಕರಾದ ಶ್ರೀ ಕೇಶವ ಬಂಗೇರ ಅವರ ನೇತೃತ್ವದಲ್ಲಿ ನಡೆದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅಭಿಯಾನದ ಜಿಲ್ಲಾ ಸಹಪ್ರಭಾರಿ ಅಶೋಕ್ ಇಳಂತಿಲ, ಸಂತಪ್ರಭಾರಿ ಭಾಸ್ಕರ್ ಧರ್ಮಸ್ಥಳ ಹಾಗೂ ಮಾಧ್ಯಮ ಸಲಹೆಗಾರ ಭುವನೇಶ್ ಗೇರುಕಟ್ಟೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಭಿಯಾನದ ಉದ್ದೇಶ ಹಾಗೂ ಸಹಿ ಸಂಗ್ರಹ ಕಾರ್ಯಕ್ರಮದ ಮಹತ್ವದ ಕುರಿತು ಗಮನ ಸೆಳೆಯಲಾಯಿತು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದರು.

