
ಅನ್ನಪೂರ್ಣ ಪ್ರಕಾಶನ, ಸಿರಿಗೇರಿ ,ಸಿರುಗುಪ್ಪ ತಾಲೂಕು ,ಬಳ್ಳಾರಿ ಜಿಲ್ಲೆ ಇದರ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು ಇದರ ಸಹಯೋಗದಲ್ಲಿ ಜಿ.ಎಸ್ ಶಿವರುದ್ರಪ್ಪ ಜನ್ಮಶತಮಾನೋತ್ಸವ ಸಾಹಿತ್ಯೋತ್ಸವ, ಭಾವಗೀತೆಗಳ ಗಾಯನ- ಕವಿಗೋಷ್ಠಿಯು ಕಾಸರಗೋಡು ಕನ್ನಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು.

ಗಡಿನಾಡು ಕಾಸರಗೋಡಿನಲ್ಲಿ ಜಿ.ಎಸ್ ಶಿವರುದ್ರಪ್ಪ ಜನ್ಮಶತಮಾನೋತ್ಸವ ಸಮಾರಂಭವನ್ನು ಪತ್ರಕರ್ತ ಮಹಾನುಬಾವಿ ಮಠ ಉದ್ಘಾಟಿಸಿದರು. ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಕೇರಳ- ಕರ್ನಾಟಕ ಭವನಕ್ಕೆ ಕರ್ನಾಟಕ ಸರಕಾರವು ಮುಂದಿನ ಬಜೆಟ್ ನಲ್ಲಿ 10 ಕೋಟಿ ರೂಪಾಯಿ ಮೊತ್ತವನ್ನು ಕಾಯ್ದಿರಿಸಬೇಕೆಂದು ಆಗ್ರಹಿಸಿದರು.2026 ನವಂಬರ್ 28 ಮತ್ತು 29 ರಂದು ನಡೆಯುವ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ -2026, ಕೇರಳ ಕರ್ನಾಟಕ ಉತ್ಸವ, ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವಕ್ಕೆ ಬೆಂಗಳೂರು ಹಾಗೂ ಇತರ ಜಿಲ್ಲೆಗಳಿಂದ ಪತ್ರಕರ್ತರು- ಮಾಧ್ಯಮದವರ ನಿಯೋಗವು ಎರಡು ದಿನಗಳ ಕಾಲ ಭಾಗವಹಿಸಲಿದ್ದು ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನಕ್ಕೆ ರಾಜ್ಯ ,ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನೀಡಲಾಗುವುದೆಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಪ್ರಕಾಶನ ಸಿರಿಗೇರಿ, ಬಳ್ಳಾರಿ ಜಿಲ್ಲೆ ಇದರ ಪ್ರಕಾಶಕ, ಲೇಖಕ, ಪತ್ರಕರ್ತ ಸಿರಿಗೇರಿ ಯರಿಸ್ವಾಮಿ ಬೆಂಗಳೂರು ಪ್ರಸ್ತಾವನೆ ಗೈದು, ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನಕ್ಕೆ ಇಂದಿನಿಂದಲೇ ಪತ್ರಿಕಾ ಪ್ರಚಾರ ಮಾದ್ಯಮಗಳ ಮೂಲಕ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಪತ್ರಕರ್ತ ಶಿವಯೋಗಿ ಮಹಾನುಭಾವಿ ಮಠ ಕರ್ನಾಟಕದ ಎಲ್ಲಾ ಜಿಲ್ಲೆಯಲ್ಲಿರುವ ಪತ್ರಿಕಾ ಸಂಪಾದಕರ ಸಂಘಟಣೆಗಳ ಮೂಲಕ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನಕ್ಕೆ ಪ್ರಚಾರ ನೀಡಲಾಗುವುದು ಎಂದು ಹೇಳಿದರು.
ವಿಶೇಷ ಆಹ್ವಾನಿತರಾಗಿ ಉಪನ್ಯಾಸಕಿ ಪವಿತ್ರಾ ಕಾಮತ್ ಮಂಗಳೂರು, ರಾಧಾಕೃಷ್ಣ ಕೆ . ಉಳಿಯತ್ತಡ್ಕ, ಕಾಸರಗೋಡು ನಗರಸಭಾ ಕೌನ್ಸಿಲರ್ ಶಾರದಾ ಬಿ., ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸುಭಾಷ್ ಪೆರ್ಲ , ವೆಂಕಟ್ ಭಟ್ ಎಡನೀರು,ಜಯಾನಂದ ಕುಮಾರ್ ಕಾಸರಗೋಡು, ಕೆ.ಎನ್ ವೆಂಕಟ್ರಮಣ ಹೊಳ್ಳ , ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಪ್ರದಾನ ಸಂಚಾಲಕ ಉನೈಸ್ ಪೆರಾಜೆ ಸುಳ್ಯ, ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಕೆ.ಗುರುಪ್ರಸಾದ್ ಕೋಟೆಕಣಿ, ಮಾಜಿ ಕೌನ್ಸಿಲರ್ ಶಂಕರ್ ಕೆ.,ಜೆ. ಪಿ. ನಗರ, ಗುರುರಾಜ ಕಾಸರಗೋಡು, ಜೆ. ಪಿ.ಮಣಿಯಂಪಾರೆ , ರವೀಂದ್ರ ಕುತ್ತಿಕೋಲು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ ಭಾವಗೀತಾ ಗಾಯನ ಸಂಭ್ರಮದಲ್ಲಿ ವಸಂತ ಬಾರಡ್ಕ,ದಿವಾಕರ ಪಿ. ಕಾಸರಗೋಡು, ಕಾವ್ಯ ಕುಶಲಕುಮಾರ ಕನ್ನಡ ಗ್ರಾಮ, ಗ್ರೀಷ್ಮ ಜಯರಾಮ ಕನ್ನಡ ಗ್ರಾಮ, ಜೆ.ಪಿ ಮಣಿಯoಪಾರೆ ,ಪವಿತ್ರ ಜೆ.ಪಿ ಮಣಿಯಂಪಾರೆ, ಶ್ರೀ ದುರ್ಗಾ ಮೆಲೋಡಿಸ್ ಮಣಿಯಂಪಾರೆ ಹಾಗೂ ಗುರುರಾಜ್ ಕಾಸರಗೋಡು ,ಸ್ವರಗಾನ ಸಂಗೀತ ಬಳಗ, ಕಾಸರಗೋಡು ತಂಡದವರು ಪಾಲ್ಗೊಂಡಿದ್ದರು.

ಜಿ. ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪತ್ರಕರ್ತ ಲೇಖಕ, ಕವಿ, ಎ.ಬಿ ಶಿವರಾಜ್ ಬೆಂಗಳೂರು ವಹಿಸಿರು.ಕವಿಗಳಾದ ದೇವರಾಜ್ ಆಚಾರ್ಯ ಸೂರoಬೈಲು , ಕು.ದೀಕ್ಷಾ ಪಾಂಡಿಗಾಯ, ಕು. ಗ್ರೀಷ್ಮ ಬಳ್ಳ ,ಪ್ರಮೀಳಾ ಚುಳ್ಳಿಕಾನ, ಸುಶೀಲಾ ಪದ್ಯಾಣ ,ಜೋಷ್ನಾ ಕಡೆಂದೇಲು, ಸುಮನ ಕರಿಂಬಿಲ, ಕು. ಅವನಿ, ವಿಜಯಕಾನ, ತೇಜಸ್ವಿನಿ ಮನೀಶ್ ಪುಚ್ಚೆಕಾಡು, ಸುಂದರ ಭಟ್ಟ ಕಾನ, ಶಶಿಕಲಾ ಟೀಚರ್ ಕುಂಬಳೆ, ಬಾಲಕೃಷ್ಣ ನಾಯ್ಕ, ಎಳ್ಕಾನ ,ನಿರ್ಮಲಾ ಸೇಸಪ್ಪ ಖಂಡಿಗೆ, ಸುಮಿತ್ರ ಎರ್ಪಕಟ್ಟೆ, ಚಿತ್ರಕಲಾ ದೇವರಾಜ್ ಸೂರಂಬೈಲು, ಮಾ. ದರ್ಶೀನ್ ಚಿರಾಲ್ ಡಿ. ಆಚಾರ್ಯ ,ಕು ನೀತಿಕಾ ಚೌಕಿ, ಮಲ್ಲಿಕಾ ರೆಂಜತಮೂಲೆ, ನಿವೇದಿತ ವಳಮಲೆ ಬದಿಯಡ್ಕ, ಮಾ. ಕೃಪೇಶ್ ಕಲ್ಲಕಟ್ಟ, ರಾಧಾಕೃಷ್ಣ ಕುರುಮುಜ್ಜಿ ಶ್ರುತಿ ಮೀಪುಗುರಿ ಅವರು ಕವಿತಾ ವಾಚನ ಗೈದರು. ವೆಂಕಟಭಟ್ ಎಡನೀರು, ಸುಶೀಲಾ ಕೆ ಪದ್ಯಾಣ, ಸುಭಾಷ್ ಪೆರ್ಲ, ಕಾವ್ಯ ಕುಶಲ, ಉದಯ ಕುಮಾರ ಕೆ,ಶಶಿಕುಮಾರ ಕೂಡ್ಲು, ಕುಶಲ ಕುಮಾರ ಕೆ ಕಾರ್ಯಕ್ರಮವನ್ನು ಸoಯೋಜಿಸಿದರು.
ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ನವಂಬರ್ 28 ಮತ್ತು 29ರಂದು ನಡೆಯುವ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ 2026, ಕೇರಳ- ಕರ್ನಾಟಕ ಉತ್ಸವ, ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವದಲ್ಲಿ ಅತ್ಯುತ್ತಮ ಕವನ ವಾಚನ ಮಾಡಿದವರಿಗೆ ರಾಜ್ಯಮಟ್ಟದ ಕವಿಗೋಷ್ಠಿ ರಾಜ್ಯ ಮಟ್ಟದ ಮಕ್ಕಳ ಕವಿಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

