ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ತಿದ್ದುಪಡಿ ಕುರಿತು ಸಚಿವರಿಗೆ ಮನವಿ ಸಲ್ಲಿಸಿದ ಶಾಸಕ ಕಿಶೋರ್ ಕುಮಾರ್ ಪುತ್ತೂರು.

ಬೆಂಗಳೂರು: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಸೆಕ್ಷನ್ 64 ಪ್ರಕಾರ, ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಡ ಪರವಾನಿಗೆ ವಿತರಿಸುವ ಅಧಿಕಾರ ಗ್ರಾಮ ಪಂಚಾಯತಿಗಿದೆ. ಆದರೆ, ಸಬ್-ಸೆಕ್ಷನ್ 5-A ಪ್ರಕಾರ ಲೇಔಟ್ ಅನುಮೋದನೆ ಮತ್ತು ಕಟ್ಟಡ ಪರವಾನಿಗೆ ವಿತರಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿಗಳು ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961 ಅನ್ನು ಪಾಲಿಸಬೇಕಾದ ಕಾರಣ, ಗ್ರಾಮ ಪಂಚಾಯತಿಗಳಿಗೆ ತಾಂತ್ರಿಕ ಅನುಮೋದನೆ ನೀಡುವ ಅಧಿಕಾರ ಇಲ್ಲದಂತಾಗಿದೆ.

ಈ ಹಿನ್ನೆಲೆಯಲ್ಲಿ, ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಅವರು ಕೆಳಗಿನ ಮುಖ್ಯ ಬೇಡಿಕೆಗಳನ್ನು ಮುಂದಿಟ್ಟರು :

ಸೆಕ್ಷನ್ 64 ಗೆ ತಿದ್ದುಪಡಿ ತಂದು, ಲೇಔಟ್ ಅನುಮೋದನೆ ಮತ್ತು ಕಟ್ಟಡ ನಕ್ಷೆಗೆ ತಾಂತ್ರಿಕ ಅನುಮೋದನೆ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸುವುದು.ಗ್ರಾಮಾಂತರ ಯೋಜನಾ ಅಧಿನಿಯಮವನ್ನು ರೂಪಿಸಿ, ಗ್ರಾಮೀಣ ವಿನ್ಯಾಸಕಾರರನ್ನು ನೇಮಿಸುವುದು.
ಸ್ವತ್ತು ತಂತ್ರಾಂಶದಲ್ಲಿ 11-B ಪ್ರಾವಧಾನವನ್ನು ಸೃಜಿಸುವುದು.


ವಸತಿ ಯೋಜನೆಯಡಿ ಮನೆ ನಿರ್ಮಿಸಿದವರಿಗೆ ಕದನಂಬ್ರ (Khata Number) ನೀಡುವ ವ್ಯವಸ್ಥೆ ಮಾಡುವುದು.
ಈಗಾಗಲೇ 94-C ಮತ್ತು 94-CC ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ನೇರವಾಗಿ ಗ್ರಾಮ ಪಂಚಾಯತಿಗಳ ಮೂಲಕ ನಮೂನೆ 9 ಮತ್ತು 11-A ನೀಡುವ ಅವಕಾಶ ಕಲ್ಪಿಸುವುದು.ಶಾಸಕರು ಈ ತಿದ್ದುಪಡಿಗಳು ಗ್ರಾಮೀಣ ಪ್ರದೇಶದ ಜನರಿಗೆ ಸುಗಮ ಆಡಳಿತ ಮತ್ತು ತ್ವರಿತ ಸೇವೆಗಳನ್ನು ಒದಗಿಸುವಲ್ಲಿ ಮಹತ್ತರ ಪಾತ್ರವಹಿಸಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!