ಇರಾ ನೇಮು ಪೂಜಾರಿಗೆ ನಾಡಪ್ರಭು ಕೆಂಪೇಗೌಡ ಧೀಮಂತ ಕನ್ನಡಿಗ ಪ್ರಶಸ್ತಿ ಪ್ರದಾನ

ಬೆಂಗಳೂರು: ಸಾಹಿತ್ಯ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ ಇರಾ ನೇಮು ಪೂಜಾರಿ ಅವರಿಗೆ ಪ್ರಸಕ್ತ ಸಾಲಿನ ‘ನಾಡಪ್ರಭು ಕೆಂಪೇಗೌಡ ಧೀಮಂತ ಕನ್ನಡಿಗ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಗುವುದು.

ಜನತಾಪ್ರಭ ದಿನಪತ್ರಿಕೆ ಹಾಗೂ ನ್ಯಾಷನಲ್ ಮೀಡಿಯಾ ಮಾಸ್ಟರ್ಸ್ ಅಸೋಸಿಯೇಷನ್, ಬೆಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಕನಕದಾಸರ ಜಯಂತಿ ಅಂಗವಾಗಿ ನವೆಂಬರ್ 29ರಂದು ಭಾನುವಾರ ಬೆಂಗಳೂರಿನ ಜಯನಗರದ ಜೆಎಸ್‌ಎಸ್ ಕ್ಯಾಂಪಸ್‌ನ ಚಿಂತನ ಮಂಟಪದಲ್ಲಿ ನಡೆಯಲಿರುವ ಮೂರನೇ ಆವೃತ್ತಿಯ ‘ಸಾಧಕರ ಸಮಾಗಮ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದ್ದು, ಇರಾ ನೇಮು ಪೂಜಾರಿ ಅವರ ಸಾಹಿತ್ಯಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕಾರ್ಯಕ್ರಮದ ಆಯೋಜಕರಾದ ಜನತಾಪ್ರಭ ನ್ಯೂಸ್ ಪೋರ್ಟಲ್‌ನ ಸಂಪಾದಕ, ಚೇತನ ಫೌಂಡೇಶನ್ ಧಾರವಾಡದ ಅಧ್ಯಕ್ಷ ಹಾಗೂ ಗಂಧದಗುಡಿ ಕನ್ನಡ ಸಂಘ, ಬೆಂಗಳೂರಿನ ರಾಜ್ಯಾಧ್ಯಕ್ಷ ಡಾ. ಚಂದ್ರಶೇಖರ ಮಾಡಲಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!