ಸಮಾಜಸೇವೆ, ನಾಯಕತ್ವ ಹಾಗೂ ಜನಪರ ಕಾಳಜಿಗೆ ಗೌರವದ ಮನ್ನಣೆ: ನೆಪೀಸಾ ಪೆರುವಾಯಿಗೆ ಗೌರವ ಡಾಕ್ಟರೇಟ್

ಹೊಸೂರು: ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ಅಕಾಡೆಮಿ ವತಿಯಿಂದ ಆಯೋಜಿಸಲಾದ Golden Icon Awards 2026 – Awards & Book of Records ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಸಮಾಜಸೇವಕಿ ನೆಪೀಸಾ ಪೆರುವಾಯಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ನವೆಂಬರ್ 28ರಂದು ಹೊಸೂರಿನ ಹೋಟೆಲ್ ಫಾರ್ಚ್ಯೂನ್‌ನಲ್ಲಿ ನಡೆದ ಸಮಾರಂಭದಲ್ಲಿ ಸಾಧನೆ, ನಾಯಕತ್ವ, ಸಮಾಜ ಸೇವೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಕೊಡುಗೆಗಳನ್ನು ಗುರುತಿಸಿ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ನೆಪೀಸಾ ಪೆರುವಾಯಿ ಅವರು ಜನಪರ ಕಾಳಜಿ, ಕರ್ತವ್ಯನಿಷ್ಠೆ ಹಾಗೂ ಸಾಮಾಜಿಕ ಬದ್ಧತೆಯಿಂದ ಗುರುತಿಸಿಕೊಂಡವರು.
ಪಂಚಾಯತ್ ಅಧ್ಯಕ್ಷೆಯಾಗಿ ಅಧಿಕಾರ ನಿರ್ವಹಿಸುವ ಸಂದರ್ಭದಲ್ಲಿ ಕೇವಲ 20 ದಿನದ ಪುಟ್ಟ ಮಗುವಿನೊಂದಿಗೆ ಪಂಚಾಯತ್ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಸಾರ್ವಜನಿಕ ಸೇವೆಯ ಮೇಲಿನ ತಮ್ಮ ಬದ್ಧತೆಯನ್ನು ಸಾರಿದ್ದರು. ಅವರ ಈ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಹಾಗೂ ಜನಮನ್ನಣೆಗೆ ಪಾತ್ರವಾಗಿತ್ತು.
ಸ್ವಚ್ಛತಾ ಕಾರ್ಯಗಳಿಗೆ ವಿಶೇಷ ಒತ್ತು ನೀಡಿದ ಅವರು, ಸ್ವಚ್ಛ ವಾಹಿನಿ ವಾಹನದ ಚಾಲಕಿಯಾಗಿ ಕಾರ್ಯನಿರ್ವಹಿಸಿದ ಪ್ರಪ್ರಥಮ ಪಂಚಾಯತ್ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಗ್ರಾಮೀಣ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಗೆ ನೀಡಿದ ಕೊಡುಗೆಯನ್ನು ಗುರುತಿಸಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪ್ರಶಸ್ತಿ ಸ್ವೀಕರಿಸಿರುವುದು ಅವರ ಸೇವಾ ಪಯಣದ ಪ್ರಮುಖ ಮೈಲಿಗಲ್ಲಾಗಿದೆ.

ಇದಲ್ಲದೆ ಪ್ರಜಾವಣಿಯ ಮಹಿಳಾ ಸಾಧಕಿ ಪ್ರಶಸ್ತಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಕೆಂಪುಕೋಟೆಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸುವ ಅವಕಾಶ, ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ,ಅಂಬೇಡ್ಕರ್ ಜಯಂತಿಯಂದು ನೀಡುವ ಬೋದಿವರ್ದನ್ ಪ್ರಶಸ್ತಿ, ಸೇರಿದಂತೆ ರಾಜ್ಯಮಟ್ಟದ ವಿವಿಧ ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿ, ಗೌರವ ಹಾಗೂ ಸನ್ಮಾನಗಳನ್ನು ಅವರು ಪಡೆದಿದ್ದಾರೆ. ಗ್ರಾಮೀಣ ಮಟ್ಟದಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದ ವೇದಿಕೆಗಳವರೆಗೆ ತಮ್ಮ ಸೇವಾ ಸಾಧನೆಗಳನ್ನು ಗುರುತಿಸಿಕೊಂಡಿರುವುದು ಅವರ ಕಾರ್ಯಕ್ಷಮತೆ ಹಾಗೂ ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿದೆ.

ಸಾಮಾಜಿಕ ಸೇವೆ, ಸಾರ್ವಜನಿಕ ಜೀವನದಲ್ಲಿ ಸಕ್ರಿಯತೆ, ಮಹಿಳಾ ನಾಯಕತ್ವ ಹಾಗೂ ಜನರೊಂದಿಗೆ ಬೆಸೆದುಕೊಂಡಿರುವ ಸೇವಾ ಮನೋಭಾವದ ಮೂಲಕ ನೆಪೀಸಾ ಪೆರುವಾಯಿ ಅವರು ಇತರ ಮಹಿಳೆಯರಿಗೂ ಪ್ರೇರಣೆಯಾಗಿದ್ದಾರೆ. ಸಾಮಾನ್ಯ ಗ್ರಾಮೀಣ ಹಿನ್ನೆಲೆಯಿಂದ ಸಾರ್ವಜನಿಕ ಸೇವೆಯ ಮೂಲಕ ಗುರುತಿಸಿಕೊಂಡು ವಿವಿಧ ಗೌರವಗಳನ್ನು ಗಳಿಸಿರುವ ಅವರ ಸಾಧನೆ ಮಹಿಳೆಯರ ಸಾಮಾಜಿಕ ಪಾಲ್ಗೊಳ್ಳುವಿಕೆ ಹಾಗೂ ನಾಯಕತ್ವದ ಮಹತ್ವವನ್ನು ಸಾರುತ್ತದೆ.

ಇದೀಗ ಗೌರವ ಡಾಕ್ಟರೇಟ್ ಪದವಿಯೊಂದಿಗೆ ನೆಪೀಸಾ ಪೆರುವಾಯಿ ಅವರು ‘ಡಾ. ನೆಪೀಸಾ ಪೆರುವಾಯಿ’ ಎಂಬ ಹೊಸ ಗೌರವದ ಗುರುತನ್ನು ಪಡೆದುಕೊಂಡಿದ್ದು, ಅವರ ಸಮಾಜಮುಖಿ ಸೇವಾ ಪಯಣಕ್ಕೆ ಮತ್ತೊಂದು ಮಹತ್ವದ ಗರಿ ಸೇರ್ಪಡೆಯಾಗಿದೆ. ಈ ಗೌರವವು ಅವರ ಸಾಧನೆಗಳಿಗೆ ಸಂದ ಮನ್ನಣೆಯಾಗಿದ್ದು, ಮುಂದಿನ ದಿನಗಳಲ್ಲಿಯೂ ಸಮಾಜಸೇವೆ ಹಾಗೂ ಜನಪರ ಕಾರ್ಯಗಳಲ್ಲಿ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಲಿ ಎಂಬ ಆಶಯದೊಂದಿಗೆ ಅಭಿನಂದನೆಗಳು ವ್ಯಕ್ತವಾಗಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!