ಮಂಗಳೂರು: ದಸರಾ ಹಬ್ಬದ ಸಂಭ್ರಮವನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ಸಮೀಕ್ಷೆಯಿಂದ ನುಂಗಿ ನೀರು ಕುಡಿದಿದೆ ; ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರಾಜ್ಯದಲ್ಲಿ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಈ ದಸರಾ ಸಂಭ್ರಮದ ಸಮಯದಲ್ಲಿ ಆರಂಭಿಸಿದ್ದು ಹಿಂದೂ ಭಾವನೆಗೆ ಧಕ್ಕೆ ತಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಗುಡುಗಿದರು.ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಹಬ್ಬದ ಹಿಂದೆ ಈ ಸಮೀಕ್ಷೆಯನ್ನು ನಡೆಸುವುದರ ಹಿಂದೆ ದೊಡ್ಡ ಷಡ್ಯಂತರ ಇದೆ ಎಂದರು.
ಹಬ್ಬದ ಹಿನ್ನಲೆಯಲ್ಲಿ ಶಿಕ್ಷಕರಿಗೆ ರಜೆ ಸಿಕ್ಕಿದ್ದರೂ ಕೂಡ ಅವರು ಸಮೀಕ್ಷೆಗೆ ಪಾಲ್ಗೊಳ್ಳುವುದು ಕಡ್ಡಾಯವಾಗಿದೆ. ಹಬ್ಬದ ರಜಾ ಅವಧಿಯಲ್ಲಿ ಅವರನ್ನು ಕರ್ತ್ಯವಕ್ಕೆ ಹಾಜರಾಗುವಂತೆ ಒತ್ತಡವನ್ನು ಹಾಕಲಾಗುತ್ತಿದೆ.ಮಾತ್ರವಲ್ಲದೆ ಶಾರದಾ ಪೂಜೆಯ ಸಮಯದಲ್ಲಿ ಸಾಮಾನ್ಯವಾಗಿ ಶಿಕ್ಷಕರು ಶಾಲೆಯಲ್ಲಿ ಇದ್ದು ಪುಸ್ತಕ ಪೂಜೆಯಲ್ಲಿ ಪಾಲ್ಗೊಳ್ಳುವುದು ವಾಡಿಕೆ ಆದರೆ ಈ ಬಾರಿ ಸಮೀಕ್ಷೆ ನಡೆಯುವುದರಿಂದ ಶಾರದಾ ಪೂಜೆಗೆ ಶಿಕ್ಷಕರ ಉಪಸ್ಥಿತಿ ಇಲ್ಲದೆ ಪೂಜೆ ನಡೆಯುವುದೇ ಅಸಾಧ್ಯವಾಗಿದೆ ಎಂದರು.
ಹಿಂದೂ ಸಂಪ್ರದಾಯದ ಮೇಲೆ ಅಗಾಧವಾಗಿ ಪರಿಣಾಮ ಬೀರುವಂತೆ ಸಿದ್ದರಾಮಯ್ಯನರ ನೇತೃತ್ವದ ಸರಕಾರ ನಡೆದುಕೊಂಡೇ ಬರುತ್ತಿದ್ದು ಈ ಬಾರಿ ಸಮೀಕ್ಷೆ ಹೆಸರಿನಲ್ಲಿ ದಸರಾ ಸಂಭ್ರಮವನ್ನು ನುಂಗಿ ಕುಡಿದ್ದಿದಾರೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಕೂಡ ಉಂಟಾಗಿದೆ ಎಂದರು.ಶಿಕ್ಷಕರಿಗೆ ಸರಿಯಾಗಿ ತರಬೇತಿಯನ್ನು ಕೊಡದೇ ಸಮೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಇದರಿಂದ ಸರಿಯಾದ ಗಣತಿ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.ಸರಕಾರ ಹೇಳುವಂತೆ ಸಮೀಕ್ಷೆಗೆ ಬಂದಾಗ ಜನರು ಮಾಹಿತಿ ನೀಡ ಬೇಕೋ, ಬೇಡವೋ ಎನ್ನುವ ಆಯ್ಕೆ ಜನರಿಗೆ ಬಿಟ್ಟದ್ದು ಎಂದು. ಸರಿಯಾಗಿ ಜನ ಅಭಿಪ್ರಾಯ ಸಂಗ್ರಹವಾಗದೆ ಸಮೀಕ್ಷೆ ಸರಿಯಾಗಿ ನಡೆಯಲು ಸಾಧ್ಯವೇ?!. ಸರಿಯಾದ ದತ್ತಾಂಶ ಸಿಗಲು ಸಾಧ್ಯವೇ?ಇತರೇ ಸಮುದಾಯದ ಹಬ್ಬ ಹರಿದಿನಗಳ ಸಮಯದಲ್ಲಿ ಇವರು ತರಾತುರಿಯ ಸಮೀಕ್ಷೆಯನ್ನು ಕೈಗೆತ್ತಿಕೊಳ್ಳುತ್ತಿದ್ದರಾ ? . ಇದು ಕೋಟ್ಯಂತರ ರೂಪಾಯಿ ಹಣವನ್ನು ಪೋಲು ಮಾಡುವ ಸಮೀಕ್ಷೆಯೇ ಆಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ,ಮುಖಂಡರಾದ ರಾಜ್ ಗೋಪಾಲ್ ರೈ, ಅರುಣ್ ಸೇಟ್, ವಸಂತ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.