ಪ್ರದೀಪ್ ಕುಮಾರ್ ಕಲ್ಕೂರರ ಸ್ವಗೃಹದಲ್ಲಿ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ವಿಶೇಷ ಪೂಜೆ….!

ಮಂಗಳೂರು:ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಧರ್ಮ ರಕ್ಷಣೆಯ ಉದ್ದೇಶದಿಂದ ದೇಶ ಪರ್ಯಟನೆಯಲ್ಲಿ ತೊಡಗಿದ್ದು,ಜನವರಿ 4 ರಿಂದ 8 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವವರು. ಈ ಕಾರ್ಯಕ್ರಮದ ಪ್ರಯುಕ್ತ ಕದ್ರಿಯ ಮಂಜು ಪ್ರಸಾದದಲ್ಲಿರುವ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರ ಸ್ವಗೃಹದಲ್ಲಿ ವಿಶೇಷ ಪೂಜೆಯು ನೆರವೇರಿತ್ತು.

ಈ ಸಂಧರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಸದಸ್ಯರಾದ ಡಾ ಎಂ ಬಿ ಪುರಾಣಿಕ್, ಸುಧಾಕರ್ ಪೇಜಾವರ ಸಹಿತ ವಿವಿಧ ಗಣ್ಯರು ಉಪಸ್ತಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!