ಮಂಗಳೂರು :ಸನ್ ಶೈನ್ ಕ್ರಿಯೇಷನ್ ಲಾಂಛನದಲ್ಲಿ ಪ್ರವೀಣ್ ಫೆರ್ನಾಂಡೀಸ್ ನಿರ್ಮಾಣದ ಹಾಗೂ ಅರ್ವಿನ್ ಲೋಬೊ ಇವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಕೊಂಕಣಿ ಚಲನ ಚಿತ್ರ ವಾಗಾಂಚೊ ಖೇಳ್ ಚಿತ್ರದ ಮೊದಲ ಹಾಡು ಮೋಗ್ ಜಾಲಾ ಇದೇ ಬರುವ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯಂದು ಸನ್ ಶೈನ್ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ದೇಶಕರಾದ ಅರ್ವಿನ್ ಲೋಬೊ ಅವರು ಹೇಳಿದರು.
ಪತ್ರಿಕಾಭವನದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಚಲನಚಿತ್ರವು ಕರಾವಳಿ ಭಾಗದ ಸಂಸ್ಕೃತಿಯಾದ ಹುಲಿ ವೇಷ ಹಾಗೂ ಕೈಂ ಆಧಾರಿತ ಚಿತ್ರವಾಗಿದ್ದು, ಇದರಲ್ಲಿ ಕೊಂಕಣಿ, ತುಳು, ಬ್ಯಾರಿ, ಕನ್ನಡ ಭಾಷೆಗಳನ್ನು ಉಪಯೋಗಿಸಲಾಗಿದೆ. ಕೊಂಕಣಿ ಭಾಷೆಯಲ್ಲಿ ಇದೊಂದು ವಿಭಿನ್ನ ರೀತಿಯ ಚಿತ್ರವಾಗಿದ್ದು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಸಿನೆಮಾವಾಗಲಿದೆ ಎಂದರು.ಮೋಗ್ ಜಾಲಾ ಹಾಡಿಗೆ ಡೊಲ್ವಿನ್ ಕೊಳಲಗಿರಿ ಸಂಗೀತ ನೀಡಿದ್ದು, ಪ್ರವೀಣ್ ಫೆರ್ನಾಂಡೀಸ್ ಇವರ ಸಾಹಿತ್ಯ ಹಾಗೂ ಪ್ರಜೋತ್ ಡೇಸ ಮತ್ತು ಜಾಸ್ಮಿನ್ ಡಿ’ಸೋಜ ಇವರು ಹಾಡನ್ನು ಹಾಡಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಮಂಗಳೂರು , ಶಕ್ತಿನಗರ, ವಾಮಂಜೂರು, ಮೂಡುಶೆಡ್ಡೆ ಅಸುಪಾಸು ಚಿತ್ರೀಕರಿಸಲಾಗಿದೆ ಎಂದರು .
ಈ ಚಿತ್ರವು ಮೇ 1 ರಂದು ತುಳುನಾಡಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹಾಗೂ ಈ ಚಿತ್ರದ ಪ್ರೀಮಿಯರ್ ಪ್ರದರ್ಶನ ಎಪ್ರಿಲ್ 17 ರಿಂದ ಆರಂಭಿಸಲಿದ್ದೇವೆ ಅಲ್ಲದೆ ವಿದೇಶಗಳಲ್ಲಿ ಬಿಡುಗಡೆಯ ದಿನಾಂಕವನ್ನು ಮುಂಬರುವ ದಿನಗಳಲ್ಲಿ ಖಚಿತಪಡಿಸುತ್ತೇವೆ ಎಂದರು.ಈ ಚಿತ್ರದಲ್ಲಿ ಹಿರಿಯ ಕಲಾವಿದ ಡೊಲ್ಲಾ ಮಂಗಳೂರು, ಅಡ್ರಿನ್ ಡಿ’ಕುನ್ದ, ಕ್ಲಿಯೋನ ಡಿ’ಸೋಜ, ವಿಯೋಲ ಡಿ’ಸೋಜ, ಅನೂಪ್ ಹ್ಯಾರಿಕ್, ಜೆರೋಮ್ ಮೊರಾಸ್, ನಾರ್ಬಟ್ ಜಾನ್, ಪ್ರಶಾಂತ್ CK, ಫ್ರಾನ್ಸಿಸ್ ಪ್ರೀತಮ್, ರೈಸನ್ ಹಾಗೂ ಇನ್ನಿತರ ಕಲಾವಿದರು ಅಭಿನಯಿಸಿದ್ದಾರೆ.
ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಂಕಲನ ಅರ್ವಿನ್ ಲೋಬೊ ಅವರು ಮಾಡಿದ್ದು, ಡೇನೆಲ್ ಜೆಸನ್ ಇವರ ಛಾಯಾಗ್ರಹಣ, ಡೊಲ್ವಿನ್ ಕೊಳಾಲಗಿರಿ ಅವರ ಸಂಗೀತ, ಹಾಗೂ ಈ ಚಿತ್ರದ ಸಹ ನಿರ್ಮಾಪಕಿಯಾಗಿ ಸೀಮಾ ಫೆರ್ನಾಂಡಿಸ್, ನೋರ್ಬಟ್ ಜಾನ್ ಇವರ ಸಹ ನಿರ್ದೇಶನ ಮತ್ತು ನಿರ್ಮಾಣ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ ಹಾಗೂ ಪ್ರಚಾರ ಕಲೆಯನ್ನು ಪವನ್ ಆಚಾರ್ಯ ಬೋಳೂರು ರೂಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡೊಲ್ಲಾ ಮಂಗಳೂರು, ಅಡ್ರನ್ ಡಿ’ಕುನ಼್ ,ಕ್ಲಿಯೋನ ಡಿ’ಸೋಜ,ಸೀಮಾ ಫೆರ್ನಾಂಡೀಸ್, ನೋರ್ಬಟ್ ಜಾನ್,ಅನೂಪ್ ಹ್ಯಾರಿಕ್ ಮುಂತಾದವರು ಉಪಸ್ಥಿತರಿದ್ದರು.