ಮಂಗಳೂರು: ನಗರದ ಪಾಲ್ದನೆ ಸಮೀಪದ ನೆಕ್ಕರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಸಂಚರಿಸುತ್ತಿದ್ದ ಬೃಹತ್ ಗಾತ್ರದ ಚಿರತೆಯನ್ನು ಅರಣ್ಯ ಇಲಾಖೆಯವರು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಕೆಲರಾಯ್ ಕ್ರಾಸ್‌ನ ನೆಕ್ಕರೆ ಪದವು ಪ್ರದೇಶದಲ್ಲಿ ಬೋನು ಅಳವಡಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿರತೆಯ ಸಂಚಾರದ ಬಗ್ಗೆ ಆತಂಕಗೊಂಡ ಸ್ಥಳೀಯರು ಮಾಜಿ ಕಾರ್ಪೊರೇಟರ್ ಹಾಗೂ ಮಾಜಿ ಮೇಯರ್ ಭಾಸ್ಕರ್ ಕೆ. ಅವರಿಗೆ ಮಾಹಿತಿ ನೀಡಿದ್ದು, ಅವರು ತಕ್ಷಣ ಸ್ಪಂದಿಸಿ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು.
ಅರಣ್ಯ ಇಲಾಖೆಯ ತ್ವರಿತ ಕ್ರಮದಿಂದ ಸ್ಥಳೀಯರಲ್ಲಿ ಉಂಟಾಗಿದ್ದ ಭಯ ನಿವಾರಣೆಯಾಗಿದ್ದು, ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.