ಏಪ್ರಿಲ್ 7 ಮತ್ತು 8 ಕ್ಕೆ ಹರಿಕಥಾ ರಂಗದಲ್ಲಿ ವಿಶಿಷ್ಟ ಪ್ರಯೋಗಕ್ಕೆ ಸಾಕ್ಷಿಯಾಗಲಿದೆ ಕೂಡ್ಲಿನ ಗುಡ್ಡೆ ಮಹಾಲಿಂಗೇಶ್ವರ ದೇವಾಲಯ

ಮಂಗಳೂರು: ಹರಿಕಥಾ ಕಲೆಯ ಮೇರು ಚೇತನವಾದ ದಿವಂಗತ ಡಾ. ಶೇಣಿ ಗೋಪಾಲ ಕೃಷ್ಣ ಭಟ್ಟರ ಜಯಂತ್ಯುತ್ಸವದ ಅಂಗವಾಗಿ ನಾಡಿನ ಕಿರಿಯ ಹಿರಿಯ ೧೨ ಹರಿದಾಸರ ಸಮ್ಮಿಲನ ಕಾರ್ಯಕ್ರಮವು ಕಾಸರಗೋಡು ಕೂಡ್ಲಿನ ಗುಡ್ಡೆ ಮಹಾಲಿಂಗೇಶ್ವರ ದೇವಾಲಯದಲ್ಲಿ ಏಪ್ರಿಲ್ 7 ಮತ್ತು 8ರಂದು ಬೆಳಿಗ್ಗೆ ಗಂಟೆ 9 ರಿಂದ ಸಂಜೆ 6.30 ರ ತನಕ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕರಾದ ಕೂಡ್ಲು ಮಹಾಬಲ ಶೆಟ್ಟಿ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಇದು ಹರಿಕಥಾ ರಂಗದಲ್ಲಿ ವಿಶಿಷ್ಟ ಪ್ರಯೋಗವಾಗಿದ್ದು ಹನ್ನೆರಡು ಹರಿದಾಸರಿಂದ ಒಂದೇ ಕಥಾ ಭಾಗದ ಹರಿಕಥಾ ಪ್ರಸ್ತುತಿಯ ಅಪರೂಪದ ಸಂಗಮಕ್ಕೆ ಇದು ಕಾರಣವಾಗಲಿದೆ . ಹರಿಕಥಾ ಕಾರ್ಯಕ್ರಮದಲ್ಲಿ ಪ್ರತಿಯೊಂದು ಕಥೆಗೆ ಒಂದು ಗಂಟೆ 30 ನಿಮಿಷಗಳ ಅವಧಿ ನಿಗದಿಪಡಿಸಲಾಗಿದೆ. ಈ ಬಾರಿ ಹರಿಕಥೆಯ ಕಥಾಭಾಗವಾಗಿ “ಸುಗ್ರೀವ ಸಖ್ಯ – ವಾಲಿ ಮೋಕ್ಷ”ವನ್ನು ಆಯ್ಕೆ ಮಾಡಲಾಗಿದೆ . ಯಸ್ ಯಲ್ ಶೇಟ್ ಡೈಮೆಂಡ್ ಹೌಸ್ ಇದರ ಮಾಲಕರಾದ ಎಂ ರವೀಂದ್ರ ಶೇಟ್ ಕಾರ್ಯಕ್ರಮದ ಪ್ರಯೋಜಕರಾಗಿದ್ದಾರೆ ಎಂದರು .

ಯುವಕರಲ್ಲಿ ಹರಿಕಥೆಯ ಮೌಲ್ಯ ಮತ್ತು ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಹರಿಕಥೆ ಪರಿಷತ್ ಸತತ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು .

ಪತ್ರಿಕಾಗೋಷ್ಠಿಯಲ್ಲಿ ಯಸ್ ಯಲ್ ಶೇಟ್ ಡೈಮೆಂಡ್ ಹೌಸ್ ಇದರ ಮಾಲಕರಾದ ಎಂ ರವೀಂದ್ರ ಶೇಟ್ , ಕಾರ್ಯಕ್ರಮ ಸಮಿತಿಯ ಸದಸ್ಯರಾದ ಸುಧಾಕರ್ ರಾವ್ ಪೇಜಾವರ , ಮುರಳಿ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!