ಮಂಗಳೂರು: ಬೆಂಗರೆಯ ಸ್ಯಾಂಡ್ಸ್‌ಪಿಟ್ ಪ್ರದೇಶದಲ್ಲಿರುವ ಶ್ರೀ ವೀರ ಭಾರತಿ ರಾಮಾಂಜನೇಯ ಮಂದಿರದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳು ಏಪ್ರಿಲ್ 17ರಿಂದ 20ರವರೆಗೆ ಭಕ್ತಿಭಾವದಿಂದ ಮೇಳೈಸಲಿದೆ ಎಂದು ಶ್ರೀ ವೀರ ಭಾರತಿ ರಾಮಾಂಜನೇಯ ಮಂದಿರ ಇದರ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಮೋಹನ್ ಬೆಂಗ್ರೆ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಸೀತಾ ರಾಮ ಲಕ್ಷ್ಮಣ ಹನುಮಾನ್ ಸಮೇತ ಪಟ್ಟಾಭಿರಾಮ ದೇವರ ಬಿಂಬ ಪ್ರತಿಷ್ಠೆ ಹಾಗೂ ವೀರ ಮಾರುತಿ ದೇವರ ಬಿಂಬ ಪುನಃ ಪ್ರತಿಷ್ಠೆ, ನಾಗಶಿಲಾ ಪುನಃ ಪ್ರತಿಷ್ಠೆ ಏಪ್ರಿಲ್ 18ರಂದು ಬೆಳಿಗ್ಗೆ 8ರಿಂದ 9ರ ವರೆಗೆ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಶ್ರೀ ಕುಡುಪು ಕೃಷ್ಣರಾಜ ತಂತ್ರಿಗಳ ಮಾರ್ಗದರ್ಶನದಲ್ಲಿ ನೆರವೇರಲಿದೆ. ಬೆಳಿಗ್ಗೆ 10.30 ಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳ ಅವರಿಂದ ಸ್ವಾಗತ ಗೋಪುರದ ಉದ್ಘಾಟನೆ ಕಾರ್ಯ ನಡೆಯಲಿದೆ .ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ನಾಡೋಜ ಜಿ ಶಂಕರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳನ್ನು ಭಾಗವಹಿಸಲಿದ್ದಾರೆ ಎಂದರು .
ಎ 19ರಂದು ಅಕ್ಷಯ ತೃತೀಯೆಯ ಅಂಗವಾಗಿ ಬೆಳಿಗ್ಗೆ 11ರಿಂದ 12ರ ವರೆಗೆ ಮಿಥುನ ಲಗ್ನದಲ್ಲಿ ಶ್ರೀ ಪಟ್ಟಾಭಿರಾಮಚಂದ್ರ ಹಾಗೂ ವೀರ ಮಾರುತಿ ದೇವರಿಗೆ ನವೋತ್ತರ ಶತಕಲಶ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಚೇತನ್ ಬೆಂಗ್ರೆ , ಸಮಿತಿಯ ಸದಸ್ಯರಾದ ಆನಂದ್ ಅಮೀನ್ , ಮೋಹನ್ ಅಮೀನ್ , ತುಕರಾಮ್ ಕರ್ಕೇರ ಉಪಸ್ಥಿತರಿದ್ದರು .