ಡಿಪ್ಲೊಮಾ ಸಿವಿಲ್ ಇಂಜಿನಿಯರ್‌ಗಳ ಹೋರಾಟ ಯಶಸ್ವಿ – ಏಪ್ರಿಲ್ 27ರಂದು ಕೃತಜ್ಞತಾ ಸಮಾರಂಭ

ಎಂ.ಸಿ.ಸಿ ರಿಜಿಸ್ಟರ್ ಡಿಪ್ಲೊಮಾ ಸಿವಿಲ್ ಇಂಜಿನಿಯರ್ಸ್ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್‌ ಇಂಜಿನಿಯ‌ರ್ಸ್ (ಇಂ) ಮಂಗಳೂರು ಕೇಂದ್ರ ಇದರ ಸಹಯೋಗದೊಂದಿಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೋಂದಾಯಿತ ವೃತ್ತಿಪರ ಡಿಪ್ಲೊಮಾ ಸಿವಿಲ್ ಇಂಜಿನಿಯರ್‌ಗಳ ಮೇಲಿನ ನಿರ್ಬಂಧಗಳಿಗೆ ತಿದ್ದುಪಡಿ ತರಲು ನಡೆದ ಹೋರಾಟ ಯಶಸ್ವಿ ಸಿಕ್ಕಿದ್ದು ಇದಕ್ಕೆ ಕಾರಣಕರ್ತರಾದ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಹಾಗೂ ಶಾಸಕ ಡಿ ವೇದವ್ಯಾಸ ಕಾಮತ್ ಗೆ ಕೃತಜ್ಞತಾ ಸಮರ್ಪಣಾ ಸಮಾರಂಭವು ಎಪ್ರಿಲ್ 27 ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂಜೆ ೪ ಗಂಟೆಯಿಂದ ನಡೆಯಲಿದೆ ಎಂದು ಎಂಸಿಸಿ ರಿಜಿಸ್ಟರ್ ಡಿಪ್ಲೋಮಾ ಸಿವಿಲ್ ಇಂಜಿನಿಯರ್ಸ್ ಇದರ ಸಂಚಾಲಕರಾದ Er ಯೋಗೀಶ ಪೈ ತಿಳಿಸಿದರು .

ಅವರು ನಗರದ ಪತ್ರಿಕಾಭವದನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , 2016ರಲ್ಲಿ ಕೇಂದ್ರ ಸರ್ಕಾರ Model Building Bye Laws ಜಾರಿಗೆ ಸೂಚನೆ ನೀಡಿದ ಹಿನ್ನೆಲೆ, 2017ರಲ್ಲಿ ರಾಜ್ಯ ಸರ್ಕಾರದ ಅಧಿಸೂಚನೆಯ ಮೂಲಕ ಡಿಪ್ಲೊಮಾ ಇಂಜಿನಿಯರ್‌ಗಳ ಕಾರ್ಯವ್ಯಾಪ್ತಿಗೆ ಕಟ್ಟುನಿಟ್ಟಿನ ಮಿತಿ ವಿಧಿಸಲಾಗಿತ್ತು. 100 ಚ.ಮೀ ವಿಸ್ತೀರ್ಣ ಹಾಗೂ G+1 ಮಹಡಿಗೆ ಮಾತ್ರ ಅವಕಾಶ ನೀಡಿದ ಈ ಆದೇಶ ತೀವ್ರ ವಿರೋಧಕ್ಕೆ ಕಾರಣವಾಯಿತು.

ಇದೇ ನಿಯಮಗಳನ್ನು 2025ರ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡ ಉಪವಿಧಿಗಳ ಕರಡಿನಲ್ಲಿ ಮುಂದುವರಿಸಲಾಗಿದ್ದು, ಇಂಜಿನಿಯರ್‌ಗಳ ಸ್ಥಾನಮಾನವನ್ನು “ಸೂಪರ್ ವೈಸರ್” ಎಂದು ಕುಗ್ಗಿಸಲಾಗಿತ್ತು. ಇದಕ್ಕೆ ವಿರೋಧವಾಗಿ ಇಂಜಿನಿಯರ್‌ಗಳು ಆಕ್ಷೇಪಣೆ ಸಲ್ಲಿಸಿ ಹೋರಾಟ ಆರಂಭಿಸಿದರು.

ಈ ಹೋರಾಟಕ್ಕೆ ವಿಧಾನಸಭಾಧ್ಯಕ್ಷ U. T. Khader ಹಾಗೂ ಶಾಸಕ D. Vedavyas Kamath ಬೆಂಬಲ ನೀಡಿದರು.ಸಂಘಟಿತ ಹೋರಾಟದ ಫಲವಾಗಿ, ಸರ್ಕಾರ ADDENDUM ಮೂಲಕ ತಿದ್ದುಪಡಿ ಮಾಡಿ, 10 ವರ್ಷಗಳ ಅನುಭವ ಹೊಂದಿರುವ ಡಿಪ್ಲೊಮಾ ಸಿವಿಲ್ ಇಂಜಿನಿಯರ್‌ಗಳಿಗೆ ವಿಸ್ತೀರ್ಣ ಹಾಗೂ ಎತ್ತರದ ಮಿತಿಗಳಿಲ್ಲದೆ ಎಲ್ಲಾ ರೀತಿಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದರು .

ಈ ಹಿನ್ನೆಲೆಯಲ್ಲಿ ನ್ಯಾಯ ಒದಗಿಸಲು ಸಹಕರಿಸಿದ ನಾಯಕರಿಗೆ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಲು ರಾಜ್ಯದ ವೃತ್ತಿಪರ ಡಿಪ್ಲೊಮಾ ಸಿವಿಲ್ ಇಂಜಿನಿಯರ್‌ಗಳು ವಿಶೇಷ ಕಾರ್ಯಕ್ರಮ ಆಯೋಜಿಸಿದೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಎಂಸಿಸಿ ರಿಜಿಸ್ಟರ್ಡ್ ಸಿವಿಲ್ ಇಂಜಿನಿಯರ್ಸ್ ಇದರ ಸಹ ಸಂಚಾಲಕರಾದ Er ರವಿಶಂಕರ್ , Er ಮೊಹಮ್ಮದ್ ಇಕ್ಬಾಲ್ , ಅಸೊಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ ಮಂಗಳೂರು ಕೇಂದ್ರ ಇದರ ಮಾಜಿ ಕಾರ್ಯದರ್ಶಿಗಳಾದ
Er ಭರತ್ ಜೆ , ಸದಸ್ಯರಾದ Er ಪ್ರೇಮಾನಂದ ಸಾಲಿಯಾನ್ , Er ಧೀರಜ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!