ಜೆಎಫ್ ಅಸೋಸಿಯೇಷನ್ ವತಿಯಿಂದ ರಕ್ತದಾನ ಶಿಬಿರ

ಮಂಗಳೂರು ನಗರದ ಬಜಾಲ್ ನಂತೂರಿನ ಜೆ ಎಫ್ ಅಸೋಸಿಯೇಷನ್ ವತಿಯಿಂದ, ಯೆನೆಪೊಯ ಬ್ಲಡ್ ಬ್ಯಾಂಕ್ ಹಾಗೂ ಮಂಗಳೂರು ಬ್ಲಡ್ ಡೋನರ್ಸ್ ಸಹಯೋಗದೊಂದಿಗೆ ಭಾನುವಾರ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಿತು.

ಸಂಸ್ಥೆಯ ಅಧ್ಯಕ್ಷ ನಝೀರ್ ಬಜಾಲ್ ಅವರ ನೇತೃತ್ವದಲ್ಲಿ ನಡೆದ ಶಿಬಿರವನ್ನು ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯ ಅಬ್ದುಲ್ ರವೂಫ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, “ರಕ್ತದಾನವು ಆರೋಗ್ಯವಂತ ವ್ಯಕ್ತಿಯ ಸಾಮಾಜಿಕ ಕರ್ತವ್ಯ. ರಕ್ತದಾನದಿಂದ ರೋಗಿಗಳು ಹಾಗೂ ಅಪಘಾತದಲ್ಲಿ ಗಾಯಗೊಂಡವರ ಜೀವ ಉಳಿಸಲು ಸಾಧ್ಯವಾಗುತ್ತದೆ. ಬಿಸಿಲಿನ ನಡುವೆಯೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಶ್ಲಾಘನೀಯ,” ಎಂದು ಹೇಳಿದರು.

ಮಂಗಳೂರು ಬ್ಲಡ್ ಡೋನರ್ಸ್ ಮುಖ್ಯಸ್ಥ ಸಿದ್ದಿಕ್ ರಕ್ತದಾನಿಗಳ ಸೇವಾಭಾವವನ್ನು ಪ್ರಶಂಸಿಸಿ ಶುಭ ಹಾರೈಸಿದರು. ಶಿಬಿರದಲ್ಲಿ ಸುಮಾರು 58 ಯುವಕರು ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ಡಾ. ದೀಪ್ತಿ, ಹಾಜಿ ಬಿ.ಎನ್. ಅಬ್ಬಾಸ್, ಗೌಷಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಕ್, ಯುವ ಕಾಂಗ್ರೆಸ್ ಅಧ್ಯಕ್ಷ ಆಸೀಫ್ ಬಜಾಲ್, ಮುಹಝಿನ್ ನಿಸಾರ್ ಹಾಸಿಮಿ, ಮುಸ್ತಫಾ ಕಟ್ಟಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇಕ್ಬಾಲ್ ಅಹಸನಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಕೀಜ್ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!