KSTA ಮಂಗಳಾದೇವಿ ವಲಯ ಸಮಿತಿಯಿಂದ 27ನೇ ವರ್ಷದ ವಾರ್ಷಿಕೋತ್ಸವ. ಟೈಲರ್ ಭವನದಲ್ಲಿ ಸತ್ಯನಾರಾಯಣ ಪೂಜೆ

ಮಂಗಳೂರು : KSTA ಕರ್ನಾಟಕ ಟೈಲರ್ ಅಸೋಸಿಯೇಷನ್ (ರಿ) ಮಂಗಳಾದೇವಿ ವಲಯ ಸಮಿತಿಯ ವತಿಯಿಂದ 27 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಟೈಲರ್ ಕುಟುಂಬಸ್ಥರಿಗೆ ಸುಖ ಶಾಂತಿ ನೆಲೆಸುವ ಅಂಗವಾಗಿ ಗೋರಿಗುಡ್ಡದಲ್ಲಿರುವ ಪ್ರಧಾನ ಕಚೇರಿ “ಟೈಲರ್ ಭವನ”ದಲ್ಲಿ ಸತ್ಯನಾರಾಯಣ ಪೂಜೆ ಭಕ್ತಿಭಾವದಿಂದ ನೆರವೇರಿತು.

ಕರ್ನಾಟಕ ಟೈಲರ್ ಅಸೋಸಿಯೇಷನ್ಸ್ ನ ರಾಜ್ಯದ ಅಧ್ಯಕ್ಷರು, ಸ್ಥಾಪಕ ಸದಸ್ಯರೂ , ಹಾಗೂ ಜಿಲ್ಲೆಯ ಕ್ಷೇತ್ರ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಆಹ್ವಾನಿತರು ಭಾಗವಹಿಸಿ ಪೂಜೆಯಲ್ಲಿ ಪಾಲ್ಗೊಂಡು . ಸಂಘದ 27 ವರ್ಷಗಳ ಸೇವಾ ಪಯಣವನ್ನು ಸ್ಮರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಂಘದ ಬೆಳವಣಿಗೆಗೆ ಸಹಕರಿಸಿದ ಹಿರಿಯ ಸದಸ್ಯರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ವಾರ್ಷಿಕೋತ್ಸವ ಅಂಗವಾಗಿ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಧ್ಯಕ್ಷೆ ರಾಜೇಶ್ವರಿ .ಕಾರ್ಯದರ್ಶಿ ನಳಿನಿ ಸದಾಶಿವ ,ಕೋಶಾಧಿಕಾರಿ ಹರಿಣಾಕ್ಷಿ ,ಜಿಲ್ಲಾ ಉಪಾಧ್ಯಕ್ಷರು ವಿಶ್ವನಾಥ್ ಬಜಾಲ್ ,ಪದಾಧಿಕಾರಿ ಅಶೋಕ್ ,ಸಬಿತಾ ಸತೀಶ್ ,ಸುಜಾತಾ ಜೋಗಿ ,ಹಿರಿಯ ಸದಸ್ಯರು ಸೀತಾರಾಮ್ ಅಮೀನ್, ಪದ್ಮನಾದ್ಭ ಜಲ್ಲಿಗುಡ್ಡೆ , ವಲಯ ಉಪಾಧ್ಯಕ್ಷರು ಅನಾಂತ್ ರಾಮ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!