ಅಕ್ರಮ ಮರಳು ಸಾಗಾಟ. ಪಿಕ್ ಅಪ್ ವಾಹನ ವಶಕ್ಕೆ: ವಿಟ್ಲ ಎಸ್. ಐ.ರಾಮಕೃಷ್ಣ ನೇತ್ರತ್ವದಲ್ಲಿ ದಾಳಿ.

ಬಂಟ್ವಾಳ: ಹೊಳೆಯಿಂದ ಮರಳು ತೆಗೆದು ಪಿಕಪ್ ವಾಹನದ ಮೂಲಕ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ವಾಹನ ಸಹಿತ ಮರಳು ವಶಕ್ಕೆ ಪಡೆದುಕೊಂಡ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕನ್ಯಾನದಲ್ಲಿ ನಡೆದಿದೆ.
ವಾಹನದ ಚಾಲಕ ಬಂಟ್ವಾಳ ಕೊಳ್ನಾಡು ನಿವಾಸಿ ರೆನೋಲ್ ಮೆಲ್ರೋಯ್ ಡಿಸೋಜ (31) ಎಂಬಾತ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಆರೋಪಿಯಾಗಿದ್ದಾನೆ.

ವಿಟ್ಲ ಕುಡ್ತಮುಗೇರು ಎಂಬಲ್ಲಿರುವ ಹೊಳೆಯಿಂದ ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೋಲೀಸ್ ಠಾಣೆಯ ಎಸ್.ಐ ರಾಮಕೃಷ್ಣ ನೇತ್ರತ್ವದಲ್ಲಿ ದಾಳಿ ಮಾಡಲಾಗಿತ್ತು.
ಬಂಟ್ವಾಳ ಕನ್ಯಾನ ಗ್ರಾಮದ ಬೈರಿಕಟ್ಟೆ ಎಂಬಲ್ಲಿ ಪಿಕ್ ಅಪ್ ವಾಹನವನ್ನು ತಡೆದು ಪರಿಶೀಲಿಸಿದಾಗ ಮರಳು ಲೋಡ್ ಮಾಡಿರುವುದು ಕಂಡುಬಂದಿತ್ತು. ವಾಹನದ ಚಾಲಕ ಬಂಟ್ವಾಳ ಕೊಳ್ನಾಡು ನಿವಾಸಿ ರೆನೋಲ್ ಮೆಲ್ರೋಯ್ ಡಿಸೋಜ (31) ಎಂಬಾತನನ್ನು ವಿಚಾರಿಸಿದಾಗ ಯಾವುದೇ ಪರವಾನಿಗೆ ಅಥವಾ ದಾಖಲಾತಿಗಳು ಇಲ್ಲದೇ ಮಾರಳು ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆ.

ಮುಂದಿನ ಕಾನೂನು ಕ್ರಮಕ್ಕಾಗಿ ಪಿಕ್ ಅಪ್ ವಾಹನವನ್ನು ಮರಳಿನ ಸಮೇತವಾಗಿ ಸ್ವಾಧೀನಪಡಿಸಿ, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 113/2026, ಕಲಂ: 303(2) BNS 2023, ಕಲಂ: 4(1), 4(1A), 21 MMDR (MINES AND MINERALS REGULATION OF DEVELOPMENT) ACT 1957 ಮತ್ತು ಕಲಂ: 3, 44 KARNATAKA MINOR MINERAL CONSISTENT RULE 1994 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!