ಮಂಗಳೂರು:ರಾಮನಗರ ಜಿಲ್ಲಾ ಮಾವು ತೋಟದ ಬೆಳೆಗಾರರ ಮಾರಾಟ ಸಂಘ (ರಿ) ವತಿಯಿಂದ “ರೈತರಿಂದ ಗ್ರಾಹಕರಿಗೆ ನೇರ ಮಾರಾಟ” ಶೀರ್ಷಿಕೆಯಡಿ ಆಯೋಜಿಸಲಾದ ಮಾವು ಮೇಳವು ನಗರದ ಕದ್ರಿ ಪಾರ್ಕ್‌ನಲ್ಲಿ ಆರಂಭಗೊಂಡಿದೆ. ಮೇಳವು ಮೇ 31ರವರೆಗೆ ನಡೆಯಲಿದೆ.ಮೇಳವನ್ನು ಕದ್ರಿ ಉದ್ಯಾನವನ ಸಮಿತಿಯ ಸದಸ್ಯ ಬಿ. ಜಗನ್ನಾಥ ಗಾಂಭೀರ್ ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಂಗಳೂರು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಕೆ., ಮೇಳದ ಮೂಲಕ ಮಂಗಳೂರಿನ ಜನತೆಗೆ ನೈಸರ್ಗಿಕವಾಗಿ ಮಾಗಿಸಿದ ಗುಣಮಟ್ಟದ ಹಣ್ಣುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಒದಗಿಸುವ ಉದ್ದೇಶ ಹೊಂದಲಾಗಿದೆ .ಮೇಳದಲ್ಲಿ 25ಕ್ಕೂ ಅಧಿಕ ಬೆಳೆಗಾರರಿಗೆ ಮಾವು ಮಾರಾಟಕ್ಕೆ ನೇರ ಅವಕಾಶ ಕಲ್ಪಿಸಲಾಗಿದೆ ಎಂದರು .
ಮೇಳದಲ್ಲಿ ಆಲ್ಫಾನ್ಸೊ, ಬಾದಾಮಿ, ಮಲ್ಲಿಕ, ರಸಪುರಿ, ಮಲಗೋವಾ, ಸಿಂಧೂರ, ಕಾಲಪಾಡಿ, ತೋತಾಪುರಿ, ಬೆಂಗನ್‌ಪಲ್ಲಿ, ಶುಗರ್ ಬೇಬಿ ಸೇರಿದಂತೆ ಹಲವು ತಳಿಗಳ ಮಾವುಗಳು ಲಭ್ಯವಿದೆ ಎಂದರು .ಈ ಸಂದರ್ಭದಲ್ಲಿ ಪ್ರಗತಿಪರ ಮಾವು ಬೆಳೆಗಾರರಾದ ವಾಸು, ಸಿದ್ದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.