ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಸ್ವಸ್ತಿಕ್ ಕಲಾಕೇಂದ್ರ ಜಲಿಗುಡ್ಡೆ ಇದರ ಹಾಗೂ ಬಾಲಿಕಾಶ್ರಮ ಕಂಕನಾಡಿ ಇಲ್ಲಿನ ಮಕ್ಕಳಿಗಾಗಿ
“ಬಾಲಿಕಾಶ್ರಮದ ಮಕ್ಕಳ ಜೊತೆ ಒಂದು ಸಂಜೆ ” ಎಂಬ ಸಮಯೋಜಿತ ಕಾರ್ಯಕ್ರಮವನ್ನು ತಾ. 22.6.2025 ನೇ ರವಿವಾರ
ಬಾಲಿಕಾಶ್ರಮದ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಪ್ರಾಥಮಿಕ ಶಾಲಾ ಬಾಲಕಿಯರಿಗಾಗಿ ರಾಮಾಯಣ ಮತ್ತು ಮಹಾಭಾರತ ಅಲ್ಲದೆ ಪುರಾಣಗಳ ಬಗ್ಗೆ ಸುಮಾರು 50 ಕ್ಕೂ ಅಧಿಕ ರಸಪ್ರಶ್ಣೆ ಯನ್ನು ಕೇಳಲಾಗಿ ಸಮರ್ಪಕವಾಗಿ ಮಕ್ಕಳು ಪ್ರಶ್ಣಾನುಸಾರ ಉತ್ತರ ನೀಡಿದರು. 60 ಕ್ಕೂ ಹೆಚ್ಚು ಬಾಲಕಿಯರು ಈ ರಸಪ್ರಶ್ಣೆಯಲ್ಲಿ ಪಾಲ್ಗೊಂಡರು. ವಿಜೇತ ಮಕ್ಕಳಿಗೆ ಸಂಸ್ಥೆಯ ವತಿಯಿಂದ ವಿಶೇಷ ಬಹುಮಾನ ನೀಡಲಾಯಿತು. ಮಕ್ಕಳ ಪುರಾಣಗಳ ಬಗ್ಗೆ ಅರಿವು ಎಷ್ಟಿದೆ ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಯಿತು. ಅಲ್ಲದೆ ನಂತರ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷರಾಗಿ ಲಲಿತಾ ಗೌಡ ಉಪಸ್ಥಿತರಿದ್ದು ಅತಿಥಿಗಳಾಗಿ .ಬಾಲಿಕಾಶ್ರಮದ ನಿರ್ವಾಹಕಿಯರಾದ ಶ್ರೀಮತಿ ಕಸ್ತೂರಿ ಹಾಗೂ ಹೇಮಾವತಿಯವರು ಉಪಸ್ಥಿತರಿದ್ದರು.
ವಿಶೇಷ ಅಭ್ಯಾಗತರಾಗಿ ಉಪಸ್ಥಿತರಿದ್ದ ಲಯನ್ ಬಿ. ಪ್ರಕಾಶ್ ಪೈ. ಯವರು ಮಾತನಾಡಿ ಪುರಾಣದ ಬಗ್ಗೆ ಮಕ್ಕಳಿಗೆ
ತಿಳಿಹೇಳುವ ಕೆಲಸ ಮನೆಯಿಂದಲೇ ಆರಂಭವಾಗಲಿ.ಇಂದು ಪುರಾಣದ ಬಗ್ಗೆ ಮಕ್ಕಳಿಗೆ ಆಸಕ್ತಿ ಇಳಿಮುಖವಾಗುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ರಾಮಾಯಣ ಮಹಾಭಾರತ,ಭಾಗವತದ ಜ್ಙಾನ ನೀಡುವ ರಸಪ್ರಶ್ಣೆ ಕಾರ್ಯಕ್ರಮ ಎಲ್ಲೆಡೆ ನಡೆಯಲಿ ಎಂದು ಪ್ರಕಾಶ್ ಪೈ. ಹೇಳಿದರು. ಪ್ರಧಾನ ಕಾರ್ಯದರ್ಶಿ ಆನಂದ ರಾವ್ , ಶೈಕ್ಷಣಿಕ ಕಾರ್ಯದರ್ಶಿ ಶಶಿಕಲಾ ಸುವರ್ಣ ವೇದಿಕೆಯಲ್ಲಿದ್ದರು.
ಸಂಘಟನಾ ಕಾರ್ಯದರ್ಶಿ ಉಷಾ ಕುಮಾರಿ “ಮಕ್ಕಳ ಮುಂದಿನ ಭವಿಷ್ಯದ ಹಾದಿ “ಎಂಬ ವಿಷಯದ ಬಗ್ಗೆ ಮಾತನಾಡಿದರು. ಪ್ರಧಾನ ಸಂಚಾಲಕ ಕೆ.ಸಿ. ಹರಿಶ್ಚಂದ್ರ ರಾವ್ ರಸಪ್ರಶ್ಣೆ ಕಾರ್ಯಕ್ರಮ ನಡೆಸಿಕೊಟ್ಟರು. ಮಕ್ಕಳಿಂದ ಸಮೂಹ ನೃತ್ಯ, ಸಮೂಹಗೀತೆ ಹಾಗೂ ಚಂದ್ರಕಲಾ ಹಾಗೂ ಹರೀಶ್ ಪ್ರಕೃತಿಯ ವರ್ಣನೆಯನ್ನು ಗಾಯನದ ಮೂಲಕ ಹಾಡಿ ಮಕ್ಕಳನ್ನು ರಂಜಿಸಿದರು. ಅದ್ಯಕ್ಷೆ ಲಲಿತಾ ಗೌಡ ಸ್ವಾಗತಿಸಿ, ಶೋಭಾ ಪ್ರಾಸ್ತಾವಿಕ ಭಾಷಣ ಮಾಡಿದರು.
ಸಂಸ್ಥೆಯ ನಾಗೇಶ್, ಗಂಗಾಧರ್, ಅಶೋಕ್ ಜಾದವ್, ಸುಮಲತಾ ವಿದ್ಯಾ ಕೆ., ದಾಕ್ಷಾಯಿಣಿ, ಪ್ರೇಮ ಭವಾನಿ, ಮಲ್ಲಿಕಾ, ಧನಿಷ್, ಆಶಿಷ್ ಭಾಗವಹಿದ್ದರು.
ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಪಡೀಲ್ ನಿರೂಪಿಸಿ ಜೊತೆ ಕಾರ್ಯದರ್ಶಿ ರೋಹಿಣಿ ವಂದಿಸಿದರು.