ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ: ನೀರಿನ ಸಮಸ್ಯೆ ಖಂಡಿಸಿ ಪಂಚಾಯತ್ ಕಚೇರಿಗೆ ಮುತ್ತಿಗೆ ಯತ್ನ

ಮಂಗಳೂರು ಹೊರವಲಯದ ಎಡಪದವು ಪಂಚ್ಯಾತ್ ವ್ಯಾಪ್ತಿಯ ಕೊರ್ಡೆಲ್ , ಪದರಂಗಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಎಡಪದವು ಪಂಚ್ಯಾತ್ ಎದುರು ಪ್ರತಿಭಟನೆ ನಡೆಯಿತು.

ಎಡಪದವು ಪಂಚ್ಯಾತ್ ವ್ಯಾಪ್ತಿಯ ಕೊರ್ಡೆಲ್ , ಪದರಂಗಿ ಗ್ರಾಮದಲ್ಲಿ ಕುಡಿಯುವ ನೀರು ಸಹಿತ ಇತರ ಮೂಲಭೂತ ಸೌಕರ್ಯಕ್ಕೆ ಕೊರತೆ ಇದ್ದು ಎಡಪದವು ಪಂಚ್ಯಾತ್ ಗೆ ಮನವಿ ನೀಡಿದರೂ ಸ್ಪಂದಿಸದ ಹಿನ್ನಲೆಯಲ್ಲಿ ಗ್ರಾಮಸ್ಥರುಎಡಪದವು ಪಂಚ್ಯಾತ್ ಎದುರು ಪ್ರತಿಭಟನೆಯನ್ನು ನಡೆಸಿದರು.

ಅಧಿಕಾರಿಗಳ ಕೊಠಡಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭ ಪೊಲೀಸರು ಅಧಿಕಾರಿಗಳನ್ನ ಪ್ರತಿಭಟನಾ ನಿರಂತರ ಬಳಿ ಕರೆತಂದರು .ಪ್ರತಿಭಟನಾ ನಿರತರು ಅಧಿಕಾರಿಗಳನ್ನ ತರಾಟೆಗೆ ತೆಗೆಕೊಂಡರು . ಸಮಸ್ಯೆಗೆ ಸ್ಪಂದಿಸುವುದಾಗಿ ಲಿಖಿತವಾಗಿ ಹೇಳಿಕೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!