ಮಂಗಳೂರು : ಮಂಗಳೂರಿನ ವಾತ್ಸಲ್ಯ ಛಾಯ ಟ್ರಸ್ಟ್ ಹಿರಿಯ ನಾಗರಿಕರ ಹಗಲು ಯೋಗಕ್ಷೇಮದ ಆಶ್ರಯದಲ್ಲಿ ಹಾಗೂ ಕರಾವಳಿಯ ನಾಡಿ ಮಿಡಿತ ಜನತೆಯ ಧ್ವನಿ ಯಾಗಿರುವ ನಮ್ಮ ಮೀಡಿಯಾ 24×7 ನ ಸಾರಥ್ಯದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ಸಂಗೀತ ರಿಯಾಲಿಟಿ ಶೋ ‘ಗೋಲ್ಡನ್ ವಾಯ್ಸ್ ಒಫ್ ನಮ್ಮ ಮೀಡಿಯಾ 2025’ ರ ಪ್ರಥಮ ಆಡಿಷನ್ ಬಲ್ಲಾಳ್ ಭಾಗ್ ನ ವಾತ್ಸಲ್ಯ ಛಾಯಾ ಟ್ರಸ್ಟ್ ನ ಸಭಾಂಗಣದಲ್ಲಿ ನಡೆಯಿತು.
ಮೊಗವೀರ ಮಹಾಜನ ಸಭಾ ದ ಉಪಾಧ್ಯಕ್ಷ ಮೋಹನ್ ಬೆಂಗ್ರೆ ಕಾರ್ಯಕ್ರಮವನ್ನು ಉಧ್ಘಾಟಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಇವರು ಹಿರಿಯ ನಾಗರಿಕರಿಗೆ ಇಂತಹ ಕಾರ್ಯಕ್ರಮವನ್ನು ಆಯೋಜಿಸುವುದು ಉತ್ತಮ ಪ್ರಕ್ರಿಯೆಯಾಗಿದೆ.ಮತ್ತು ತಮ್ಮ ಅರೋಗ್ಯ ಸುಧಾರಣೆಗೆ ಪೂರಕವಾಗಲಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಕೋ . ಆಪರೇಟಿವ್ ಅಧ್ಯಕ್ಷ ಅನಿಲ್ ಕುಮಾರ್ ಬೊಕ್ಕ ಪಟ್ನ, ಕೊಡುಗೈ ದಾನಿ ರಾಜೇಂದ್ರ ರಾವ್ ಕಲ್ಬಾಯಿ ,ಯುವ ನಾಯಕ ಸಂದೀಪ್ ಪುತ್ರನ್ ಉಳ್ಳಾಲ್ ,ಅನ್ವಿತ್ ಎಂಟರ್ಪ್ರೈಸಸ್ ಮಾಲಕ ಪ್ರಕಾಶ್ ,ಕಾರ್ಪೊರೇಟರ್ ಸುಧೀರ್ ಶೆಟ್ಟಿ ಕಣ್ಣೂರ್ ,ನಮ್ಮ ಮೀಡಿಯಾ 24×7 ನ ಆಡಳಿತ ನಿರ್ದೇಶಕ ಜಗದೀಶ್ ಮಡಿವಾಳ ಹಿರಿಯ ನಾಗರಿಕ ಸಮಿತಿ ಅಧ್ಯಕ್ಷ ಶಶಿಧರ್ ,ವಾತ್ಸಲ್ಯ ಛಾಯ ಟ್ರಸ್ಟ್ ನ ಅಧ್ಯಕ್ಷ ಸೂರಜ್ ಸಾಗರ್ ಕುಂಪಲ ಮೊದಲಾದವರು ಕಾರ್ಯಕ್ರಮಕ್ಕೆ ಶುಭಾಂಶನೇ ಗೆಯ್ದರು.
ವಿ ಜೆ ತೃಪ್ತಿ ಸುವರ್ಣ ಕಾರ್ಯಕ್ರಮವನ್ನು ನಿರೂಪಿಸಿದರು .ಶ್ರೀಮತಿ ಪ್ರತಿಮ ನಿರ್ವಹಣೆ ಗೆಯ್ದರು.ವಾತ್ಸಲ್ಯ ಛಾಯ ಟ್ರಸ್ಟ್ ಕಳೆದ ಹಲವಾರು ವರ್ಷಗಳಿಂದ ಹಿರಿಯ ನಾಗರಿಕರಿಗೆ ಹಗಲು ಸಮಯದಲ್ಲಿ ಚಟುವಟಿಯಲ್ಲಿ ನಿರತರಾಗಿಸಿ ಮಾನಸಿಕ ನೆಮ್ಮದಿ ಒದಗಿಸುವ ಮೂಲಕ ಆರೋಗ್ಯ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತಿರುವ ಈ ಸಂಸ್ಥೆ ತಮ್ಮ ಸೇವಾ ಕಚೇರಿಯಲ್ಲಿ ಉಚಿತವಾಗಿ ಸೇವೆಯನ್ನು ನೀಡುತ್ತಿದೆ.