ನೇತ್ರಾವತಿ ಲಯನ್ಸ್ ಕ್ಲಬ್‌ಗೆ ನೂತನ ಸಾರಥ್ಯ: ಪದಗ್ರಹಣದೊಂದಿಗೆ ₹3.5 ಲಕ್ಷ ಸೇವಾಕಾರ್ಯಗಳ ಹಸ್ತಾಂತರ

ಮಂಗಳೂರು: ನೇತ್ರಾವತಿ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 6ರಂದು ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಜಿಲ್ಲಾ ಮಾಜಿ ಗವರ್ನರ್ (PDG) ಸಂಜಿತ್ ಶೆಟ್ಟಿ ಅವರ ನೇತೃತ್ವದಲ್ಲಿ ನೆರವೇರಿತು.

ಸಮಾರಂಭದಲ್ಲಿ ಡಾ. ವಿದ್ಯಾಧರಿ ಶೆಟ್ಟಿ ಅಧ್ಯಕ್ಷೆಯಾಗಿ, ಲಯನ್ ಶೋಭಾ ಸುಬ್ರಮಣ್ಯ ಕಾರ್ಯದರ್ಶಿಯಾಗಿ ಹಾಗೂ ಲಯನ್ ಸುಪಲಾ ಗೋಪಾಲ್ ಖಜಾಂಜಿಯಾಗಿ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದ ಅಂಗವಾಗಿ ನೂತನ ಅಧ್ಯಕ್ಷೆ ಡಾ. ವಿದ್ಯಾಧರಿ ಶೆಟ್ಟಿ ಅವರು ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ಹಸ್ತಾಂತರಿಸಿದರು. ಜೊತೆಗೆ ಸುಮಾರು ₹3.5 ಲಕ್ಷ ಮೌಲ್ಯದ ವಿವಿಧ ಸೇವಾ ಯೋಜನೆಗಳ ಚೆಕ್ಕುಗಳನ್ನು ವಿತರಿಸಿ ಸಮಾಜಮುಖಿ ಸೇವಾ ಕಾರ್ಯಗಳಿಗೆ ಚಾಲನೆ ನೀಡಿದರು.

ಸಮಾರಂಭದಲ್ಲಿ ಲಯನ್ಸ್ ಸಂಸ್ಥೆಯ ಮಾಜಿ ಗವರ್ನರ್ ವಸಂತ್ ಕುಮಾರ್ ಶೆಟ್ಟಿ (PMCC), ಅರುಣ್ ಶೆಟ್ಟಿ (PDC), ಆಲ್ವಿನ್ ಪತ್ರಾವ್ (PDG), ಜೆ. ಕೆ. ರಾವ್ (PDG), ಕ್ಯಾಬಿನೆಟ್ ಕಾರ್ಯದರ್ಶಿ ಲಯನ್ ಪ್ರಶಾಂತ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷೆ ಲಯನ್ ವಿನಯ ಶೆಟ್ಟಿ, ಪ್ರಾಂತೀಯ ಅಧ್ಯಕ್ಷೆ ಲಯನ್ ಆಶಾ ನಾಗರಾಜ್ ಹಾಗೂ ವಲಯಾಧ್ಯಕ್ಷ ಲಯನ್ ಸಂತೋಷ್ ಪೂಂಜಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಸಮಾರಂಭವು ಸೇವಾ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಸಂಕಲ್ಪದೊಂದಿಗೆ ಯಶಸ್ವಿಯಾಗಿ ನೆರವೇರಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!