ಆ.9ರಂದು ‘ದಿ ಅಲ್ಟಿಮೇಟ್ ಜನರಲ್ ನಾಲೆಡ್ಜ್ ಕ್ವಿಜ್–2026’

ಮಂಗಳೂರು, ಆ.6: ಮಂಗಳೂರು ಕ್ವಿಜ್ ಫೌಂಡೇಶನ್ (ಎಂ.ಕ್ಯೂ.ಎಫ್.) ವತಿಯಿಂದ ‘ದಿ ಅಲ್ಟಿಮೇಟ್ ಜನರಲ್ ನಾಲೆಡ್ಜ್ ಕ್ವಿಜ್–2026’ ಸ್ಪರ್ಧೆಯು ಆಗಸ್ಟ್ 9ರಂದು ಬೆಂದೂರ್‌ವೆಲ್‌ನ ಸೇಂಟ್ ಆಗ್ನೆಸ್ ಕಾಲೇಜಿನ ಅವಿಲಾ ಹಾಲ್ (ಎ–4)ನಲ್ಲಿ ನಡೆಯಲಿದೆ ಎಂದು ಎಂ.ಕ್ಯೂ.ಎಫ್. ಅಧ್ಯಕ್ಷ ಡಾ. ಅಣ್ಣಪ್ಪ ಕಾಮತ್ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 26 ವರ್ಷಗಳಿಂದ ರಸಪ್ರಶ್ನೆ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಎಂ.ಕ್ಯೂ.ಎಫ್. ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು, ವೈದ್ಯರು, ವಿವಿಧ ಕ್ಷೇತ್ರಗಳ ಉದ್ಯೋಗಿಗಳು ಹಾಗೂ ಸಾರ್ವಜನಿಕರನ್ನು ಜ್ಞಾನ ವಿನಿಮಯದ ವೇದಿಕೆಯಲ್ಲಿ ಒಗ್ಗೂಡಿಸುತ್ತಿದೆ ಎಂದರು.

ಈ ಬಾರಿಯ ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ 10 ಗಂಟೆಗೆ 10ನೇ ತರಗತಿಯವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಮಧ್ಯಾಹ್ನ 2 ಗಂಟೆಗೆ ಸಾರ್ವಜನಿಕರ ವಿಭಾಗದ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ.

ಇತಿಹಾಸ, ವಿಜ್ಞಾನ, ಕ್ರೀಡೆ, ಮನರಂಜನೆ, ಪ್ರಚಲಿತ ವಿದ್ಯಮಾನಗಳು ಸೇರಿದಂತೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಪ್ರಶ್ನೆಗಳು ಸ್ಪರ್ಧೆಯಲ್ಲಿ ಒಳಗೊಂಡಿರಲಿವೆ. ಸ್ಪರ್ಧೆಯಲ್ಲಿ ಭಾಗವಹಿಸಲು ಪೂರ್ವ ನೋಂದಣಿ ಕಡ್ಡಾಯವಾಗಿದ್ದು, ಆಸಕ್ತ ತಂಡಗಳು 9902096914, 9845513748 ಹಾಗೂ 9440805413 ಸಂಖ್ಯೆಗಳ ವಾಟ್ಸಾಪ್ ಮೂಲಕ ಹೆಸರು ನೋಂದಾಯಿಸಬಹುದಾಗಿದೆ.

ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಮಂಗಳೂರಿನಂತಹ ನಗರದಲ್ಲಿ ಸ್ವಯಂಸೇವಕರ ಸಹಕಾರದೊಂದಿಗೆ ಕಳೆದ 26 ವರ್ಷಗಳಿಂದ ನಿರಂತರವಾಗಿ ರಸಪ್ರಶ್ನೆ ಚಟುವಟಿಕೆಗಳನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಮೂಲಕ ಜ್ಞಾನ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದ್ದೇವೆ ಎಂದು ಡಾ. ಅಣ್ಣಪ್ಪ ಕಾಮತ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ. ವಿಶ್ವಾಸ್ ಕೆ. ಪೈ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!