ಫ್ಲೆಕ್ಸ್ ತೆರವು ಖಂಡಿಸಿ ಎಸ್‌ಡಿಪಿಐ ನಾಯಕರ ಪ್ರತಿಭಟನೆ; ಬಂಧನ

ಮಂಗಳೂರು:ನಗರದ ಟೌನ್‌ಹಾಲ್‌ನಲ್ಲಿ ನಡೆಯಲಿರುವ ಜಿಲ್ಲಾ ಯುವ ಅಸೆಂಬ್ಲಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಳವಡಿಸಲಾಗಿದ್ದ ‘ಯಂಗ್ ಡೆಮಾಕ್ರಟಿಕ್’ ಕಾರ್ಯಕ್ರಮದ ಫ್ಲೆಕ್ಸ್ ತೆರವುಗೊಳಿಸಿದ ಕ್ರಮವನ್ನು ಖಂಡಿಸಿ ಎಸ್‌ಡಿಪಿಐ ಜಿಲ್ಲಾ ನಾಯಕರು ಪ್ರತಿಭಟನೆ ನಡೆಸಿದರು.

ಮಂಗಳೂರು ಟೌನ್‌ಹಾಲ್‌ ಸಮೀಪ ಬ್ಯಾನರ್ ತೆರವುಗೊಳಿಸಿದ್ದನ್ನು ವಿರೋಧಿಸಿ ಎಸ್‌ಡಿಪಿಐ ನಾಯಕರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಪೊಲೀಸರ ಕ್ರಮವನ್ನು ಖಂಡಿಸಿದ ಪ್ರತಿಭಟನಾಕಾರರು, ಫ್ಲೆಕ್ಸ್ ತೆರವುಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಬಳಿಕ ಎಸ್‌ಡಿಪಿಐ ನಾಯಕರನ್ನು ಬಿಡುಗಡೆ ಮಾಡಲಾಯಿತು.

ಇದೇ ವೇಳೆ ಎಸ್‌ಡಿಪಿಐನ ‘ಯಂಗ್ ಡೆಮಾಕ್ರಟಿಕ್’ ಸಂಘಟನೆಯ ಉದ್ಘಾಟನೆ ಹಾಗೂ ಜಿಲ್ಲಾ ಯುವ ಅಸೆಂಬ್ಲಿ ಕಾರ್ಯಕ್ರಮ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!