ಸೆ.22ರಂದು ಪೇಜ್ ವತಿಯಿಂದ ವಿಶ್ವ ಅಲ್ಝೈಮರ್ ದಿನಾಚರಣೆ

ಹಿರಿಯ ನಾಗರಿಕರಿಗೆ ಬುದ್ಧಿಮತ್ತೆ ಪರೀಕ್ಷೆ, ಉಚಿತ ಆರೋಗ್ಯ ತಪಾಸಣೆ

ಮಂಗಳೂರು: ಪೀಪಲ್ಸ್ ಅಸೋಸಿಯೇಶನ್ ಫಾರ್ ಜೆರಿಯಾಟ್ರಿಕ್ ಎಂಪವರ್‌ಮೆಂಟ್ (ಪೇಜ್) ವತಿಯಿಂದ ವಿಶ್ವ ಅಲ್ಝೈಮರ್ ದಿನಾಚರಣೆ ಕಾರ್ಯಕ್ರಮ ಸೆ.22ರಂದು ಬೆಳಗ್ಗೆ 9 ಗಂಟೆಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.

ಸೋಮವಾರ ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಟ್ರಸ್ಟಿ ಡಾ. ಸಿ.ವಿ. ರಘುವೀರ್, ಕಾರ್ಯಕ್ರಮದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ, ಯೇನೆಪೊಯ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ವಿಜಯ್ ಕುಮಾರ್ ಎಂ., ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ರೆ. ಫಾ. ಫೌಸ್ಟಿನ್ ಲ್ಯೂಕಸ್ ಲೋಬೋ, ರೋಹನ್ ಕಾರ್ಪೊರೇಷನ್‌ನ ಆಡಳಿತ ನಿರ್ದೇಶಕ ಡಾ. ರೋಹನ್ ಮೊಂತೇರೊ, ಎಂಆರ್‌ಪಿಎಲ್ ಜಿಜಿಎಂ (ಎಚ್‌ಆರ್) ಪ್ರಶಾಂತ್ ಪೊದುವಾಳ್, ಲಯನ್ಸ್ ಜಿಲ್ಲಾ ಗವರ್ನರ್ ಎಚ್.ಎಂ. ತಾರಾನಾಥ್ ಹಾಗೂ ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಟ್ರಸ್ಟಿ ಡಾ. ಪ್ರಭಾ ಅಧಿಕಾರಿ ಎಂ.ಆರ್. ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಹಿರಿಯ ನಾಗರಿಕರಿಗೆ ಬುದ್ಧಿಮತ್ತೆ ಪರೀಕ್ಷೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಹಿರಿಯ ನಾಗರಿಕರು ಮತ್ತು ಅವರನ್ನು ಆರೈಕೆ ಮಾಡುವವರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹಿರಿಯ ನಾಗರಿಕರಿಗಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಟ್ರಸ್ಟಿಗಳಾದ ಜೆರಾರ್ಡಿನ್ ಡಿ’ಸೋಜಾ ಹಾಗೂ ಮೋಹನ್ ರಾಜ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!