ಮಂಗಳೂರು: ಕನ್ನಡ ಜಾನಪದ ಪರಿಷತ್ ಹಾಗೂ ಜಾನಪದ ಯುವ ಬ್ರಿಗೇಡ್ ಇದರ ಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಡಾ| ಎಸ್. ಬಾಲಾಜಿ, ಬೆಂಗಳೂರು ಇವರು ಜಾನಪದ ಕಲೆಯನ್ನು ಉಳಿಸುವ ಮತ್ತು ಬೆಳೆಸುವ ದೃಷ್ಟಿಯಿಂದ ರಾಜ್ಯಾದಂತ ಹಲವಾರು ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಿ ಕಲೆಯನ್ನು ಪೋಷಿಸುತ್ತಾ ಬರುತ್ತಿದ್ದು ಇದರ ಪ್ರಯತ್ನದ ಫಲವಾಗಿ ಸ್ಥಾಪಿತವಾದ ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಯುವ ಬ್ರಿಗೇಡ್ ಘಟಕದ
ಉದ್ಘಾಟನಾ ಕಾರ್ಯಕ್ರಮವು ಸುರತ್ಕಲ್‌ನ ಗೋವಿಂದದಾಸ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಸಂಯೋಗದೊಂದಿಗೆ ಪದವಿ ಕಾಲೇಜಿನ ಎ.ವಿ. ಹಾಲ್‌ನಲ್ಲಿ ಆಗಸ್ಟ್ 7 ರಂದು ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ ಎಂದು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಯುವ ಬ್ರಿಗೇಡ್ ಘಟಕದ ಸಂಚಾಲಕರಾದ ಸಂಪತ್ ಎಸ್ ಬಿ ತಿಳಿಸಿದರು .
ಸುದ್ದಿಗಾರೊಂದಿಗೆ ಮಾತನಾಡಿದ ಅವರು , ಜಾನಪದ ಸಮೂಹಗಳನ್ನು ಒಗ್ಗೂಡಿಸಿಕೊಂಡು ಅಳಿಸಿ ಹೋದಂತಹ ಕೆಲವೊಂದು ಜಾನಪದ ಕಲೆಗಳನ್ನು ಮರು ಪರಿಚಯಿಸುವುದರ ಮೂಲಕ ಮತ್ತು ಎಲೆ ಮರೆಯಲ್ಲಿ ಇರುವಂತಹ ಕೆಲವೊಂದು ಜನಪದ ಸಂಗೀತ ಹಾಗೂ ಜಾನಪದ ನೃತ್ಯ ತಂಡಗಳನ್ನು ಗುರುತಿಸಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದರ ಮೂಲಕ ಜಾನಪದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುತ್ತಾರೆ.
2022ರಲ್ಲಿ ತರಿಕೆರೆಯಲ್ಲಿ ಹಾಗೂ ಇತ್ತೀಚೆಗೆ ಜೂನ್ 25, 2025ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ದಶಮಾನೋತ್ಸವದ ಆಚರಣೆಯ ಸಲುವಾಗಿ ಪ್ರಪ್ರಥಮ ಬಾರಿಗೆ ಜಾನಪದ ಪರಿಷತ್ ಸಮ್ಮೇಳನವನ್ನು ನಡೆಸಿ ಅನೇಕ ಗಣ್ಯ ವ್ಯಕ್ತಿಗಳಿಗೆ. ಗುರು ಹಿರಿಯರಿಗೆ ಹಾಗೂ ನೂರಾರು ಯುವಕ-ಯುವತಿಯರಿಗೆ ಕಲಾ ಕ್ಷೇತ್ರ, ಸಮಾಜ ಸೇವೆ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆ ಹಾಗೂ ಸಾಧನೆಗೈಯ್ಯುತ್ತಿರುವವರನ್ನು ಗಮನಿಸಿ ಅವರಿಗೆ ರಾಜ್ಯ ಪ್ರಶಸ್ತಿ, ಜಾನಪದ ಪ್ರಶಸ್ತಿ, ರಾಜ್ಯ ಯುವ ಪ್ರಶಸ್ತಿ ಹಾಗೂ ರಾಜ್ಯ ಯುವ ಸಿರಿ ಪ್ರಶಸ್ತಿಗಳನ್ನು ನೀಡುವುದರ ಮೂಲಕ ಸಮ್ಮೇಳನಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿ ಜನಾಭಿನಂದನೆಗಳಿಗೆ ಪಾತ್ರರಾಗಿದ್ದಾರೆ. ಮುಂದೆ ಪುತ್ತೂರು, ಧಾರವಾಡ, ಗೋವಾ ಹಾಗೂ ದೆಹಲಿಯಲ್ಲಿ ಅನೇಕ ಜಾನಪದ ಯುವ ಸಮೂಹ ಒಕ್ಕೂಟ ಕಾರ್ಯಕ್ರಮಗಳನ್ನು ಹಾಗೂ ಜಾನಪದ ಪರಿಷತ್ ಸಮ್ಮೇಳನಗಳನ್ನು ಹಮ್ಮಿಕೊಂಡಿರುತ್ತಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ – ಎಚ್. ಜಯಚಂದ್ರ ಹತ್ವಾರ್ ಹಿಂದು ವಿದ್ಯಾದಾಯಿನೀ ಸಂಘ, ಸುರತ್ಕಲ್ ಇದರ ಅಧ್ಯಕ್ಷರಾದ ಎಚ್. ಜಯಚಂದ್ರ ಹತ್ವಾರ್ , ನಿರ್ದೇಶಕರು, ಗೋವಿಂದದಾಸ ಕಾಲೇಜು, ಸುರತ್ಕಲ್, ‘ಕಲಾ ಗುರಿಕಾರೆ’ ಬಿರುದಾಂಕಿತರಾದ ರಮೇಶ್ ಭಟ್ , ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀ ಪಿ. ಉಪಸ್ಥಿತತರಿರುವವರು .
ಸುದ್ದಿಗೋಷ್ಠಿಯಲ್ಲಿ ಶ್ರೇಯಾ ರೋಹಿತ್ ಉಚ್ಚಿಲ , ಲಕ್ಷ್ಮಿ ನಾರಾಯಣ ಉಪಸ್ಥಿತತರಿದ್ದರು .