ಮಂಗಳೂರು ದುರ್ಘಟನೆ: ವಿದ್ಯಾರ್ಥಿಯ ಮರಣಕ್ಕೆ ಯೆಂಗ್ ಡೆಮಾಕ್ರಟ್ಸ್ ಕರ್ನಾಟಕ ತೀವ್ರ ಸಂತಾಪ

ಮಂಗಳೂರಿನ ರಾಮ ಲಕ್ಷ್ಮಿನಾರಾಯಣ ಕನ್ವೆನ್ಷನ್ ಹಾಲಿನಲ್ಲಿ ನಡೆದ ಅತ್ಯಂತ ದುರದೃಷ್ಟಕರ ಮತ್ತು ಆಘಾತಕಾರಿ ಮೇಲ್ಮಹಡಿ (ಬಾಲ್ಕನಿ) ಕುಸಿತ ದುರ್ಘಟನೆಯಲ್ಲಿ ಒಬ್ಬ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿರುವ ಹಾಗೂ ನಾಲ್ವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಸುದ್ದಿ ತಿಳಿದು ನನ್ನ ಮನಸ್ಸಿಗೆ ತೀವ್ರ ನೋವು ಹಾಗೂ ಆಘಾತವಾಗಿದೆ.

ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭಕ್ಕೆ ಅತ್ಯುತ್ಸಾಹದಿಂದ ಬಂದಿದ್ದ ವಿದ್ಯಾರ್ಥಿಗಳ ಪೈಕಿ ಓರ್ವ ಪ್ರತಿಭಾವಂತ ವಿದ್ಯಾರ್ಥಿ ಈ ಅನಿರೀಕ್ಷಿತ ದುರಂತಕ್ಕೆ ಬಲಿಯಾಗಿರುವುದು ಮತ್ತು ಇತರ ಕೆಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರ ಅಗಲಿಕೆಯಿಂದ ದುಃಖದಲ್ಲಿರುವ ಕುಟುಂಬವರ್ಗ, ಸ್ನೇಹಿತರು ಹಾಗೂ ವಿದ್ಯಾರ್ಥಿ ಬಂಧುಗಳ ನೋವಿನಲ್ಲಿ ಯಂಗ್ ಡೆಮಾಕ್ರಟ್ಸ್ ಭಾಗಿಯಾಗುತ್ತದೆ.

ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತನು ನೀಡಲಿ ಹಾಗೂ ಗಾಯಗೊಂಡಿರುವ ವಿದ್ಯಾರ್ಥಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ.

ತನ್ವೀರ್ ಉಳ್ಳಾಲ
ಜಿಲ್ಲಾ ಜಾಯಿಂಟ್ ಕನ್ವೀನರ್,
ಯೆಂಗ್ ಡೆಮಾಕ್ರಟ್ಸ್ ಮಂಗಳೂರು ನಗರ.

SHARE
Loading spinner

Leave a Reply

Your email address will not be published. Required fields are marked *

error: Content is protected !!