ಮಲ್ಲಿಕಟ್ಟೆಯ ಪಾರ್ಕ್ ನಲ್ಲಿ ಅಳವಡಿಸಲಾಗಿದ್ದ ಸ್ಯಾಕ್ಸೋಫೋನ್ ಪ್ರತಿಕೃತಿ ಕಳವಾಗಿದೆ.ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ಕೆಲವು ವರ್ಷಗಳ ಹಿಂದೆ ಪಾರ್ಕ್ ಅಭಿವೃದ್ಧಿ ಪಡಿಸಲಾಗಿತ್ತು.ಈ ವೇಳೆ ಕದ್ರಿ ಗೋಪಾಲನಾಥ ಅವರ ನೆನಪಿನಲ್ಲಿ ಪೀಠವನ್ನು ನಿರ್ಮಿಸಿ, ಗಾಜಿನ ಬಾಕ್ಸ್ ನಲ್ಲಿ ಸ್ಯಾಕ್ಸೋಫೋನ್ ಪ್ರತಿಕೃತಿಯನ್ನು ಇರಿಸಲಾಗಿತ್ತು.

ಪಾರ್ಕ್ ಗೆ ಬರುವ ಎಲ್ಲರ ಆಕರ್ಷಣೆಯ ಕೇಂದ್ರವೂ ಆಗಿತ್ತು. ಆದರೆ ಅನುದಾನ ಕೊರತೆಯಿಂದ ಇತ್ತೀಚಿನ ವರ್ಷಗಳಲ್ಲಿ ಪಾರ್ಕ್ ನಿರ್ವಹಣೆ ಆಗದೆ, ಪಾಳು ಬಿದ್ದಿತ್ತು. ವಾರದ ಹಿಂದೆ ಯಾರೋ ಕಳ್ಳರು ಕಳವು ಮಾಡಿದ್ದಾರೆ. ಈ ಬಗ್ಗೆ ನಿಕಟಪೂಟ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿ ಅವರು ಕದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಕಳ್ಳ ರ ಪತ್ತೆ ಆಗಿಲ್ಲ



