ಮಂಗಳೂರು: MRPL ಘಟಕದಲ್ಲಿ ಸಂಭವಿಸಿದ ಸ್ಫೋಟದ ಬೆನ್ನಲ್ಲೇ ನೆಲ್ಲಿದಡಿ ಜುಮಾದಿ ದೈವಸ್ಥಾನಕ್ಕೆ ಸಂಬಂಧಿಸಿದ ದೈವದ ಅಭಯ ನುಡಿ ತುಳುನಾಡಿನಲ್ಲಿ ಮತ್ತೆ ಚರ್ಚೆಗೆ ಬಂದಿದೆ.

ದೈವಸ್ಥಾನದ ಜಾಗವನ್ನು MRPL ಸ್ವಾಧೀನಪಡಿಸಿಕೊಳ್ಳಲು ಮುಂದಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ, ಸ್ಥಳೀಯರು ಹಲವು ವರ್ಷಗಳಿಂದ ಜಾಗ ಉಳಿಸುವ ಹೋರಾಟ ನಡೆಸಿದ್ದರು ಎನ್ನಲಾಗಿದೆ. 2026ರ ಮೇ ತಿಂಗಳಲ್ಲಿ ನಡೆದ ದೈವಾರಾಧನೆ ವೇಳೆ ದೈವವು, “ನನ್ನ ಮಣ್ಣನ್ನು ಉಳಿಸಿಕೊಳ್ಳಲು ನನಗೆ ಗೊತ್ತಿದೆ. ನೀವು ಯಾರೂ ಭಯಪಡಬೇಡಿ. ಒಂದು ವರ್ಷದಲ್ಲಿ ನಾನು ಏನು ಮಾಡುತ್ತೇನೆ ನೋಡಿ” ಎಂದು ಅಭಯ ನೀಡಿತ್ತು ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.
MRPLನಲ್ಲಿ ಸ್ಫೋಟ ಸಂಭವಿಸಿದ ಬಳಿಕ ಈ ಹಿಂದಿನ ದೈವದ ನುಡಿಯನ್ನು ಸ್ಥಳೀಯರು ಹಾಗೂ ದೈವಾರಾಧಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತಾಪಿಸುತ್ತಿದ್ದಾರೆ.


