
ಸಂವಿಧಾನ ರಕ್ಷಣೆ,ಪ್ರಜಾ ಪ್ರಭುತ್ವದ ಉಳಿವಿಗೆ,ಮತಗಳ್ಳತನ, ಎಸ್ ಐ ಆರ್ ದುರುಪಯೋಗ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಜಾ ಆಗ್ರಹಿಸಿ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ ದೆಹಲಿಯಲ್ಲಿ ನಾಳೆ ಹಮ್ಮಿಕೊಳ್ಳಲಾದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ಅವರ ನೇತೃತ್ವದ ಎಂಟು ಮಂದಿಯ ತಂಡವು ಇಂದು ಇಂಡಿಗೋ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಲಿದೆ.

ಟಿ.ಎಂ. ಶಹೀದ್ ತೆಕ್ಕಿಲ್, ಅವರ ಜೊತೆ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಸಲೀಂ ಪೆರುಂಗೋಳಿ, ತಾಲ್ಲೂಕು ಘಟಕದ ಪ್ರಮುಖರಾದ ಫಾರೂಕ್, ಶಂಸುದ್ದೀನ್ ಇಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದು,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿದ್ದಿಕ್, ಯುವಕ ಕಾಂಗ್ರೆಸ್ಸಿನ ಮನ್ಸೂರ್, ಹನೀಫ್ ಮತ್ತು ಶರೀಫ್ ನಾಳೆ ದೆಹಲಿ ತಲುಪಲಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ದುರಹಂಕಾರ ಮತ್ತು ಏಕದಿಪತ್ಯದ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆ ಯಶಸ್ವಿಯಾಗುತ್ತದೆ ಎಂದು ಟಿ ಎಂ ಶಾಹಿದ್ ತೆಕ್ಕಿಲ್ ತಿಳಿಸಿದರು.


