ಮಂಗಳೂರಿನಲ್ಲಿ ಭಾರತ್ ಪೆಟ್ರೋಲಿಯಂ ಆಟೋಕ್ರಾಸ್-2026 ಸ್ಪರ್ಧೆ: 120ಕ್ಕೂ ಅಧಿಕ ಚಾಲಕರ ಭಾಗಿ

ಮಂಗಳೂರು: ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಶನ್ (MMSA) ವತಿಯಿಂದ ಆಯೋಜಿಸಲಾದ ಭಾರತ್ ಪೆಟ್ರೋಲಿಯಂ ಆಟೋಕ್ರಾಸ್-2026 ಸ್ಪರ್ಧೆ ಅ.11ರಂದು ಕೂಳೂರಿನ ಗೋಲ್ಡ್‌ಫಿಂಚ್ ಸಿಟಿ ಮೈದಾನದಲ್ಲಿ ನಡೆಯಿತು. ಸ್ಪರ್ಧೆಯಲ್ಲಿ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕೊಡಗು, ಮೂಡುಬಿದಿರೆ ಹಾಗೂ ಕೇರಳ ಸೇರಿದಂತೆ ವಿವಿಧ ಪ್ರದೇಶಗಳಿಂದ ಸುಮಾರು 120 ಮಂದಿ ಚಾಲಕರು ಭಾಗವಹಿಸಿ ತಮ್ಮ ಚಾಲನಾ ಕೌಶಲ್ಯವನ್ನು ಪ್ರದರ್ಶಿಸಿದರು.

ಒಟ್ಟು 13 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಚಾಲಕರು ತಮ್ಮ ವೇಗ, ನಿಯಂತ್ರಣ ಹಾಗೂ ನೈಪುಣ್ಯವನ್ನು ಪ್ರದರ್ಶಿಸಿದರು. ಸುಮಾರು 1.1 ಕಿ.ಮೀ. ಉದ್ದದ ಟ್ರ್ಯಾಕ್‌ನಲ್ಲಿ ಹಲವು ತಿರುವುಗಳು ಮತ್ತು ಸವಾಲಿನ ಮಾರ್ಗಗಳನ್ನು ರೂಪಿಸಲಾಗಿತ್ತು. ಈ ಸವಾಲಿನ ಹಾದಿಯಲ್ಲಿ ವಾಹನಗಳನ್ನು ನಿಯಂತ್ರಿಸುತ್ತಾ ಗುರಿ ತಲುಪುವುದು ಚಾಲಕರಿಗೆ ನೈಪುಣ್ಯದ ಪರೀಕ್ಷೆಯಾಯಿತು.

ಸ್ಪರ್ಧೆಯಲ್ಲಿ ವೇಗದ ಪುರುಷ ಚಾಲಕ, ವೇಗದ ಮಹಿಳಾ ಚಾಲಕಿ ಹಾಗೂ ಅತ್ಯುತ್ತಮ ಟ್ಯೂನರ್ ವಿಭಾಗಗಳಲ್ಲಿ ವಿಶೇಷ ಟ್ರೋಫಿಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿತ್ತು. ಮಹಿಳಾ ಚಾಲಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವೇಗದ ಮಹಿಳಾ ಚಾಲಕಿಗೆ ವಿಶೇಷ ‘ಲೇಡೀಸ್ ಟ್ರೋಫಿ’ಯನ್ನೂ ಮೀಸಲಿಡಲಾಗಿತ್ತು.

ಮೋಟಾರ್ ಸ್ಪೋರ್ಟ್ಸ್ ಆಸಕ್ತರಿಗೆ ರೋಚಕ ಅನುಭವ ನೀಡಿದ ಈ ಸ್ಪರ್ಧೆಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ವಾಹನಗಳ ವೇಗ, ಚಾಲಕರ ಸಾಹಸ ಹಾಗೂ ನಿಖರ ನಿಯಂತ್ರಣದ ಪ್ರದರ್ಶನದೊಂದಿಗೆ ಆಟೋಕ್ರಾಸ್ ಸ್ಪರ್ಧೆ ಗಮನ ಸೆಳೆಯಿತು.

SHARE
Loading spinner

One thought on “ಮಂಗಳೂರಿನಲ್ಲಿ ಭಾರತ್ ಪೆಟ್ರೋಲಿಯಂ ಆಟೋಕ್ರಾಸ್-2026 ಸ್ಪರ್ಧೆ: 120ಕ್ಕೂ ಅಧಿಕ ಚಾಲಕರ ಭಾಗಿ”

Leave a Reply

Your email address will not be published. Required fields are marked *

error: Content is protected !!