ಪುತ್ತೂರಿನಲ್ಲಿ ನ.28, 29ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಪಂಚಮುಖಿ ಆಂಜನೇಯ ಯಾಗ

ಪುತ್ತೂರು:ಲೋಕಕಲ್ಯಾಣದ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪಂಚಮುಖಿ ಆಂಜನೇಯ ಯಾಗವು ನ.28 ಮತ್ತು 29ರಂದು ಪುತ್ತೂರು ನೆಲಪ್ಪಾಲಿನ ವೀರಾಂಜನೇಯ ಕ್ಷೇತ್ರದಲ್ಲಿ ನಡೆಯಲಿದೆ.ಪಂಚಮುಖಿ ಆಂಜನೇಯ ಯಾಗ ಸಮಿತಿಯ ನೇತೃತ್ವದಲ್ಲಿ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮದ ಪೂರ್ವಸಿದ್ದತಾ ಸಭೆ ಪುತ್ತೂರಿನ ಕಲ್ಲೇಗದ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆಯಿತು.

ಓಂಕಾರ ಹಾಗೂ ವೈದಿಕ ಮಂತ್ರಗಳೊಂದಿಗೆ ಆರಂಭಗೊಂಡ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ ಅವರ ಮಾರ್ಗದರ್ಶನದಲ್ಲಿ ಬಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ ಅವರು ಯಾಗ ಸಮಿತಿಯ ಪದಾಧಿಕಾರಿಗಳನ್ನು ಘೋಷಿಸಿದರು. ಯಾಗದ ಗೌರವಾಧ್ಯಕ್ಷರಾಗಿರುವ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ ಮಾತನಾಡಿ, ಹಿಂದೂ ಸಮಾಜದ ಸಂಘಟನೆ ಹಾಗೂ ಧಾರ್ಮಿಕ ಕ್ಷೇತ್ರಗಳ ಸಂರಕ್ಷಣೆಯ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ.ಈ ಕಾರ್ಯಕ್ರಮಕ್ಕೆ ರಾಜಕೀಯದ ಸಂಬಂಧವಿಲ್ಲ.ಹಿಂದೂಗಳೆಲ್ಲರೂ ಒಗ್ಗಟ್ಟಿನಿಂದ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬೇಕು. ಜಾತಿ, ಮತ ಹಾಗೂ ಪಕ್ಷಗಳ ಭೇದಗಳಿಂದಾಗಿ ಹಿಂದೂ ಸಮಾಜ ವಿಭಜನೆಯಾಗದೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಹಿಂದೂ ಸಮಾಜಕ್ಕೆ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಸಂಘಟಿತ ಪ್ರಯತ್ನ ಅಗತ್ಯ.ಧಾರ್ಮಿಕ ಕ್ಷೇತ್ರಗಳ ರಕ್ಷಣೆ ಹಾಗೂ ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. ಯಾಗದ ಯಶಸ್ಸಿಗಾಗಿ ಸಮಿತಿಯ ಪದಾಧಿಕಾರಿಗಳು ಮುಂದಿನ ಒಂದು ತಿಂಗಳ ಕಾಲ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು.ಮನೆಮನೆಗೆ ಭೇಟಿ ನೀಡಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು.

ಪ್ರತಿಯೊಬ್ಬರೂ ಇದನ್ನು ತಮ್ಮ ಮನೆಯ ಕಾರ್ಯಕ್ರಮವೆಂದು ಭಾವಿಸಿ ಸಹಕಾರ ನೀಡಬೇಕು ಎಂದು ಅವರು ಕರೆ ನೀಡಿದರು. ಪಂಚಮುಖಿ ಆಂಜನೇಯ ಯಾಗ ಸಮಿತಿ ಅಧ್ಯಕ್ಷ,ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಭೆಯ ಬಳಿಕ ಮಾಧ್ಯಮದ ಜೊತೆ ಮಾತನಾಡಿ ಪಂಚಮುಖಿ ಆಂಜನೇಯ ಯಾಗವು ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಒಳಿತಿನ ಸಂಕಲ್ಪದೊಂದಿಗೆ ನಡೆಯಲಿದ್ದು, ಭಕ್ತರೆಲ್ಲರೂ ಭಕ್ತಿ ಮತ್ತು ಶ್ರದ್ಧೆಯಿಂದ ಯಾಗದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು. ಪಂಚಮುಖಿ ಆಂಜನೇಯ ಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ನೆಲಪ್ಪಾಲಿನ ವೀರಾಂಜನೇಯ ಕ್ಷೇತ್ರದಲ್ಲಿ ನ.27ರಿಂದ 29ರವರೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ತಿಳಿಸಿದರು.7 ವರ್ಷಗಳ ಹಿಂದೆ ಶ್ರೀ ಗುರುಕೃಷ್ಣ ಚಾರಿಟೇಬಲ್ ಟ್ರಸ್ಟ್‌ನ ಅಡಿಯಲ್ಲಿ ನೆಲಪ್ಪಾಲಿನಲ್ಲಿ ವೀರಾಂಜನೇಯ ಕ್ಷೇತ್ರವನ್ನು ಪ್ರತಿಷ್ಠಾಪಿಸಲಾಗಿದೆ.ವಿಶ್ವ ಹಿಂದೂ ಪರಿಷತ್‌ ಹೆಸರಿನಲ್ಲಿ ದೇಶದಲ್ಲಿರುವ ಏಕೈಕ ಆಂಜನೇಯ ಕ್ಷೇತ್ರ ಇದಾಗಿದೆ ಎಂದ ಅವರು,ಜಾತಿ, ಮತ ಹಾಗೂ ಪಕ್ಷಗಳ ಕಾರಣದಿಂದ ವಿಭಜನೆಯಾಗುತ್ತಿರುವ ಹಿಂದೂ ಸಮಾಜ ಒಗ್ಗಟ್ಟಾಗಬೇಕು ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ತೊಂದರೆ ಹಾಗೂ ಅನಾಹುತಗಳನ್ನು ತಡೆಯುವ ಸಂಕಲ್ಪದೊಂದಿಗೆ ಪಂಚಮುಖಿ ಆಂಜನೇಯ ಯಾಗವನ್ನು ಆಯೋಜಿಸಲಾಗಿದೆ.

ಇದು ಹಿಂದೂ ಸಮಾಜದ ಕಲ್ಯಾಣಕ್ಕಾಗಿ ನಡೆಯುವ ಯಾಗವಾಗಿದೆ.ಪಂಚಮುಖಿ ಆಂಜನೇಯ ಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ನೆಲಪ್ಪಾಲಿನ ವೀರಾಂಜನೇಯ ಕ್ಷೇತ್ರದಲ್ಲಿ ನ.27ರಿಂದ 29ರವರೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ತಿಳಿಸಿದರು.7 ವರ್ಷಗಳ ಹಿಂದೆ ಶ್ರೀ ಗುರುಕೃಷ್ಣ ಚಾರಿಟೇಬಲ್ ಟ್ರಸ್ಟ್‌ನ ಅಡಿಯಲ್ಲಿ ನೆಲಪ್ಪಾಲಿನಲ್ಲಿ ವೀರಾಂಜನೇಯ ಕ್ಷೇತ್ರವನ್ನು ಪ್ರತಿಷ್ಠಾಪಿಸಲಾಗಿದೆ.ವಿಶ್ವ ಹಿಂದೂ ಪರಿಷತ್‌ ಹೆಸರಿನಲ್ಲಿ ದೇಶದಲ್ಲಿರುವ ಏಕೈಕ ಆಂಜನೇಯ ಕ್ಷೇತ್ರ ಇದಾಗಿದೆ ಎಂದ ಅವರು,ಜಾತಿ, ಮತ ಹಾಗೂ ಪಕ್ಷಗಳ ಕಾರಣದಿಂದ ವಿಭಜನೆಯಾಗುತ್ತಿರುವ ಹಿಂದೂ ಸಮಾಜ ಒಗ್ಗಟ್ಟಾಗಬೇಕು ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ತೊಂದರೆ ಹಾಗೂ ಅನಾಹುತಗಳನ್ನು ತಡೆಯುವ ಸಂಕಲ್ಪದೊಂದಿಗೆ ಪಂಚಮುಖಿ ಆಂಜನೇಯ ಯಾಗವನ್ನು ಆಯೋಜಿಸಲಾಗಿದೆ. ಇದು ಹಿಂದೂ ಸಮಾಜದ ಕಲ್ಯಾಣಕ್ಕಾಗಿ ನಡೆಯುವ ಯಾಗವಾಗಿದಪಂಚಮುಖಿ ಆಂಜನೇಯ ಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ನೆಲಪ್ಪಾಲಿನ ವೀರಾಂಜನೇಯ ಕ್ಷೇತ್ರದಲ್ಲಿ ನ.27ರಿಂದ 29ರವರೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ತಿಳಿಸಿದರು.7 ವರ್ಷಗಳ ಹಿಂದೆ ಶ್ರೀ ಗುರುಕೃಷ್ಣ ಚಾರಿಟೇಬಲ್ ಟ್ರಸ್ಟ್‌ನ ಅಡಿಯಲ್ಲಿ ನೆಲಪ್ಪಾಲಿನಲ್ಲಿ ವೀರಾಂಜನೇಯ ಕ್ಷೇತ್ರವನ್ನು ಪ್ರತಿಷ್ಠಾಪಿಸಲಾಗಿದೆ.ವಿಶ್ವ ಹಿಂದೂ ಪರಿಷತ್‌ ಹೆಸರಿನಲ್ಲಿ ದೇಶದಲ್ಲಿರುವ ಏಕೈಕ ಆಂಜನೇಯ ಕ್ಷೇತ್ರ ಇದಾಗಿದೆ ಎಂದ ಅವರು,ಜಾತಿ, ಮತ ಹಾಗೂ ಪಕ್ಷಗಳ ಕಾರಣದಿಂದ ವಿಭಜನೆಯಾಗುತ್ತಿರುವ ಹಿಂದೂ ಸಮಾಜ ಒಗ್ಗಟ್ಟಾಗಬೇಕು ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ತೊಂದರೆ ಹಾಗೂ ಅನಾಹುತಗಳನ್ನು ತಡೆಯುವ ಸಂಕಲ್ಪದೊಂದಿಗೆ ಪಂಚಮುಖಿ ಆಂಜನೇಯ ಯಾಗವನ್ನು ಆಯೋಜಿಸಲಾಗಿದೆ. ಇದು ಹಿಂದೂ ಸಮಾಜದ ಕಲ್ಯಾಣಕ್ಕಾಗಿ ನಡೆಯುವ ಯಾಗವಾಗಿದೆ.ಎಲ್ಲರೂ ಒಗ್ಗಟ್ಟಿನಿಂದ ಪಾಲ್ಗೊಳ್ಳಬೇಕು ಎಂದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಹಾಗೂ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ಯಾಗ ನಡೆಯಲಿದೆ.ನ.29ರಂದು ಬೆಳಿಗ್ಗೆ 7 ಗಂಟೆಗೆ 10 ಮಂದಿ ಋತ್ವಿಜರಿಂದ ಪಾರಾಯಣ ನಡೆಯಲಿದ್ದು, ಮಧ್ಯಾಹ್ನ ಯಾಗದ ಪೂರ್ಣಾಹುತಿ ನೆರವೇರಲಿದೆ ಎಂದು ಅವರು ವಿವರಿಸಿದರು. ಯಾಗದ ಅಂಗವಾಗಿ ಕರ್ನಾಟಕದ ಪ್ರಸಿದ್ಧ ವಿದ್ವಾಂಸ, ಉಪನ್ಯಾಸಕ ಹಾಗೂ ಚಿಂತಕ ಡಾ।ಪಾವಗಡ ಪ್ರಕಾಶ್ ರಾವ್ ಅವರು ರಾಮಾಯಣದ ಸುಂದರಕಾಂಡದ ಕುರಿತು ಉಪನ್ಯಾಸ ನೀಡಲಿದ್ದಾರೆ. ಭಕ್ತರಿಂದ ಹನುಮಾನ್‌ ಚಾಲೀಸಾ ಪಠಣ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.ಶಾಸ್ತ್ರೀಯ ಸಂಗೀತ ಗಾಯಕಿ ಮೈಥಿಲಿ ಠಾಕೂರ್ ಅಥವಾ ಭಜನಾ ಸಾಹಿತ್ಯದ ಕುರಿತು ಹರ್ಷವರ್ಧನ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಆಂಜನೇಯನ ಸೇವೆ ಮಾಡುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಯಾಗದ ಯಶಸ್ಸಿಗಾಗಿ ಪ್ರತಿಯೊಬ್ಬರೂ ತಮ್ಮ ಮನೆಯ ಕಾರ್ಯಕ್ರಮವೆಂದು ಭಾವಿಸಿ ಭಾಗವಹಿಸಬೇಕು ಎಂದು ಮುರಳಿಕೃಷ್ಣ ಹಸಂತಡ್ಕ ಮನವಿ ಮಾಡಿದರು. ಶ್ರೀ ಪಂಚಮುಖಿ ಆಂಜನೇಯ ಯಾಗ ಸಮಿತಿ ಗೌರವಾಧ್ಯಕ್ಷರಾದ ಮಾಜಿ ಶಾಸಕ ಸಂಜೀವ ಮಠಂದೂರು, ಜಯಂತ್ ನಡುಬೈಲು, ಸಂಚಾಲಕ ಕೆ.ಜೀವಂಧ‌ರ್ ಜೈನ್, ಉಪಾಧ್ಯಕ್ಷರಾದ ಡಾ.ಕೃಷ್ಣಪ್ರಸನ್ನ,ಪುನೀತ್ ಅತ್ತಾವರ, ವಿಶ್ವಹಿಂದು ಪರಿಷದ್ ಗ್ರಾಮಾಂತರ ಪ್ರಖಂಡದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳದಡ್ಡ, ವಿಭಾಗದ ಪ್ರಮುಖರಾದ ಪ್ರದೀಪ್‌ ಸರಿಪಲ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯಾಗ ಸಮಿತಿಯ ಸಹ ಸಂಚಾಲಕ ಶ್ರೀಧರ್‌ ತೆಂಕಿಲ ಪ್ರಾರ್ಥಿಸಿದರು. ವಿಶ್ವಹಿಂದು ಪರಿಷದ್ ಗ್ರಾಮಾಂತರ ಪ್ರಖಂಡ ಕಾರ್ಯದರ್ಶಿ ಸಹದೇವ್ ಮುಕ್ರಂಪಾಡಿ ಸ್ವಾಗತಿಸಿದರು. ಮುರಳಿಕೃಷ್ಣ ಹಸಂತಡ್ಕ ವಂದಿಸಿದರು.ಶ್ರೀ ಪಂಚಮುಖಿ ಆಂಜನೇಯ ಯಾಗ ಸಮಿತಿ ಗೌರವಾಧ್ಯಕ್ಷರಾಗಿ ಯು ಪೂವಪ್ಪ,ಡಾ.ಎಂ.ಕೆ.ಪ್ರಸಾದ್, ಸಂಜೀವ ಮಠಂದೂರು, ಜಯಂತ್ ನಡುಬೈಲು, ರಂಜಿತಾ ಶಂಕರ್, ಗೌರವ ಸಲಹೆಗಾರರಾಗಿ ಕಲ್ಲೇಗ ಸಂಜೀವ ನಾಯಕ್, ಕಿಶೋರ್ ಕುಮಾ‌ರ್ ಬೊಟ್ಯಾಡಿ, ಮನೋಜ್ ಶಾಸ್ತ್ರೀ, ಹಾರಕರೆ ವೆಂಕಟ್ರಮಣ ಭಟ್, ರಾಜಿ ಬಲರಾಮ ಆಚಾರ್ಯ, ಅಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್, ಸಂಚಾಲಕರಾಗಿ ಕೆ.ಜೀವಂಧ‌ರ್ ಜೈನ್, ಪ್ರಧಾನ ಕಾರ್ಯದರ್ಶಿಗಳಾಗಿ ಮುರಳೀಕೃಷ್ಣ ಹಸಂತಡ್ಕ, ಪುನೀತ್ ಅತ್ತಾವರ, ಉಪಾಧ್ಯಕ್ಷರುಗಳಾಗಿ ಡಾ.ಕೃಷ್ಣಪ್ರಸನ್ನ,ಡಾ|ರವೀಶ್‌ ಪಡುಮಲೆ, ಡಾ.ಸುರೇಶ್ ಪುತ್ತೂರಾಯ, ಉಜ್ವಲ್ ಪ್ರಭು, ಕೃಷ್ಣ ಶೆಟ್ಟಿ ಕಡಬ, ದಿವಾಕರ ದಾಸ್ ನೆರ್ಲಾಜೆ, ಡಾ.ಸುಧಾ ರಾವ್, ಭಾಮಿ ಅಶೋಕ್ ಶೆಣೈ, ಭಾಸ್ಕರ ಪೆರುವಾಯಿ, ರಾಧಾಕೃಷ್ಣ ನಂದಿಲ ಮತ್ತು ಕಾರ್ಯದರ್ಶಿ, ಸಹಸಂಚಾಲಕರು ಮತ್ತು ವಿವಿಧ ಸಮಿತಿಗಳ ಸಂಚಾಲಕರನ್ನು ಸಮಿತಿ ಪ್ರಧಾನ ಕಾರ್ಯದರ್ಶಿ ಪುನಿತ್ ಅತ್ತಾವರ ಘೋಷಣೆ ಮಾಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!