ಮಂಗಳೂರು: ನಗರದ ಪಿವಿಎಸ್ ಕಲಾಕುಂಜದಲ್ಲಿರುವ ಶ್ರೀ ಕೃಷ್ಣ ಬಲರಾಮ ಮಂದಿರ (ಇಸ್ಕಾನ್) ವತಿಯಿಂದ ಅಕ್ಟೋಬರ್ 26ರಿಂದ ನವೆಂಬರ್ 24ರವರೆಗೆ ಕಾರ್ತಿಕ ದಾಮೋದರ ದೀಪೋತ್ಸವ ನಡೆಯಲಿದೆ.

ಪ್ರತಿದಿನ ಸಂಜೆ 7 ಗಂಟೆಯಿಂದ ಉತ್ಸವದ ಅಂಗವಾಗಿ ವಿಶೇಷ ದರ್ಶನ, ತುಪ್ಪದ ದೀಪ ಸಮರ್ಪಣೆ, ಭಜನೆ ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದೆ.
ಕಾರ್ತಿಕ ಮಾಸದಲ್ಲಿ ಶ್ರೀಕೃಷ್ಣನಿಗೆ ತುಪ್ಪದ ದೀಪವನ್ನು ಸಮರ್ಪಿಸುವುದರಿಂದ ಆಧ್ಯಾತ್ಮಿಕ ಪುಣ್ಯ ಲಭಿಸುತ್ತದೆ ಎಂಬ ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಭಕ್ತರಿಗೆ ದೀಪ ಸಮರ್ಪಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದಾಮೋದರನ ದರ್ಶನ ಪಡೆದು, ದೀಪ ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಮಂದಿರದ ಪ್ರಕಟಣೆ ತಿಳಿಸಿದೆ.

