ಮಂಗಳೂರು: ಜನವಿರೋಧಿ ಎಸ್ಐಆರ್ (SIR) ವಿರುದ್ಧ ಹಾಗೂ ಅರ್ಹ ಮತದಾರರ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ಅಕ್ಟೋಬರ್ 23ರಂದು ಮಂಗಳೂರಿನ ಕ್ಲಾಕ್ ಟವರ್ನಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ.

ಪ್ರಜಾಪ್ರಭುತ್ವ ಉಳಿಸಿ ಆಂದೋಲನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೇತೃತ್ವದಲ್ಲಿ ಸಂಜೆ 4ರಿಂದ ರಾತ್ರಿ 9.30ರವರೆಗೆ ‘ಮಂಗಳೂರಿನಲ್ಲಿ ಜಂತರ್ ಮಂತರ್’ ಹೆಸರಿನಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ. ಎನ್ಡಿಎ ಹೊರತಾದ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಸಮಾನ ಮನಸ್ಕ ಸಂಘಟನೆಗಳ ನಾಯಕರು ಹಾಗೂ ಸಂವಿಧಾನ ಪ್ರೇಮಿಗಳು ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸುವಂತೆ ಆಂದೋಲನದ ಸಹ ಸಂಚಾಲಕ ಅನ್ವರ್ ಸಾದತ್ ಬಜತ್ತೂರು ಮನವಿ ಮಾಡಿದ್ದಾರೆ.

