ಆಕ್ರಮವಾಗಿ ಕೆಂಪುಕಲ್ಲು ಸಾಗಾಟದ ಲಾರಿ ಮತ್ತು ಅಪಾರ ಮೌಲ್ಯದ ಸೊತ್ತುಗಳನ್ನು ವಶಪಡಿಸಿದ ವಿಟ್ಲಾ ಪೊಲೀಸರು.

ಬಂಟ್ವಾಳ: ಅಕ್ರಮವಾಗಿ ಕೇರಳ ರಾಜ್ಯದಿಂದ ದ.ಕ.ಜಿಲ್ಲೆಗೆ ಕೆಂಪು ಕಲ್ಲು ಸಾಗಿಸುವ ವೇಳೆ ವಿಟ್ಲ ಪೋಲೀಸರ ಕೈಗೆ ಸಿಕ್ಕಿಹಾಕಿಕೊಂಡಿರುವ ಘಟನೆ ನಡೆದಿದ್ದು, ಕೆಂಪು ಕಲ್ಲು ಸಹಿತ ಲಾರಿ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ವಿಟ್ಲ ನಿವಾಸಿ ಮಹಮ್ಮದ್ ಮುಸ್ತಾಫ ಹಾಗೂ ಉಕ್ಕುಡ ನಿವಾಸಿ ಸಲಾಂ ಮತ್ತು ಧರ್ಮತ್ತಡ್ಕ ನಿವಾಸಿ ಅಶ್ರಫ್ ಎಂಬವರ ಮೇಲೆ ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


‌ರೂ.7,500 ಸಾವಿರ ಮೌಲ್ಯದ 270 ಕೆಂಪು ಕಲ್ಲು ಸಹಿತ ಸಾಗಾಟಕ್ಕೆ ಬಳಸಿದ 12,00,000 ಲಕ್ಷ ಮೌಲ್ಯದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.ಕೇರಳ ರಾಜ್ಯದ ಧರ್ಮತ್ತಡ್ಕದಿಂದ ಮಹಮ್ಮದ್ ಮುಸ್ತಫಾ, ಸಲಾಂ ಉಕ್ಕುಡ ಮತ್ತು ಅಶ್ರಫ್ ಧರ್ಮತ್ತಡ್ಕರವರು ಸೇರಿಕೊಂಡು ಅಕ್ರಮವಾಗಿ ಕೆಂಪು ಕಲ್ಲು ಸಾಗಾಟದ ದಂದೆ ಮಾಡುತ್ತಿದ್ದರು.


ವಿಟ್ಲ ಎಸ್.ಐ.ರಾಮಕೃಷ್ಣ ಅವರು ವಾಹನ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಲಾರಿಯನ್ನು ನಿಲ್ಲಿಸಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಇವರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.ಇದೀಗ ‌ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!