ನ.15ರಂದು ಗೋವಿಗಾಗಿ ಹೊರೆಕಾಣಿಕೆ ಸಮರ್ಪಣೆ; 25ನೇ ವರ್ಷದ ರಜತ ಸಂಭ್ರಮ

ಮಂಗಳೂರು: ಗೋವನಿತಾಶ್ರಯ ಟ್ರಸ್ಟ್ (ರಿ.) ಮಂಗಳೂರು ಹಾಗೂ ವಿಶ್ವ ಹಿಂದೂ ಪರಿಷತ್ ಸಹಯೋಗದ ಗೋ ಹೊರೆಕಾಣಿಕೆ ಸಮಿತಿಯ ವತಿಯಿಂದ 25ನೇ ವರ್ಷದ ರಜತ ಸಂಭ್ರಮದ ಅಂಗವಾಗಿ ಗೋವಿಗಾಗಿ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ನವೆಂಬರ್ 15ರಂದು ಭಾನುವಾರ ಮಧ್ಯಾಹ್ನ 2.30ಕ್ಕೆ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಕ್ಷೇತ್ರದಿಂದ ಪಜೀರು ಗೋಶಾಲೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.

ನವೆಂಬರ್ 16ರಂದು ಸೋಮವಾರ ಪಜೀರು ಗೋಶಾಲೆಯಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅಂದು ಬೆಳಿಗ್ಗೆ ಚಂಡಿಕಾಯಾಗ ನಡೆಯಲಿದ್ದು, ಬಳಿಕ ಅನ್ನಸಂತರ್ಪಣೆ ನಡೆಯಲಿದೆ .

ಗೋಸಂರಕ್ಷಣೆಯ ಮಹತ್ವ ಸಾರುವ ಈ ರಜತ ಸಂಭ್ರಮದ ಕಾರ್ಯಕ್ರಮದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗೋವಿಗಾಗಿ ಹೊರೆಕಾಣಿಕೆ ಸಮರ್ಪಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!