ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಬೋಲಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ (Bolas Agro Private Limited) ಎಂಬ ಆಹಾರ ಉತ್ಪಾದನಾ ಘಟಕದಿಂದ ಒಟ್ಟು 1,240 ಕೆ.ಜಿ. ಖಾದ್ಯ ತೈಲವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.


ತೈಲದ ಬ್ರ್ಯಾಂಡಿಂಗ್ ಹಾಗೂ ಲೇಬಲಿಂಗ್‌ನಲ್ಲಿ ಕಂಡುಬಂದ ಲೋಪಗಳು ಮತ್ತು ತಪ್ಪು ಮಾಹಿತಿ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಶೇಂಗಾ ಎಣ್ಣೆಯ ತಲಾ 10 ಕೆ.ಜಿ. ತೂಕದ 11 ಬಾಕ್ಸ್‌ಗಳು, ಶೇಂಗಾ ಎಣ್ಣೆಯ ತಲಾ 35 ಲೀಟರ್ ಸಾಮರ್ಥ್ಯದ 30 ಕ್ಯಾನ್‌ಗಳು ಹಾಗೂ ತೆಂಗಿನ ಎಣ್ಣೆ: ತಲಾ 20 ಕೆ.ಜಿ. ತೂಕದ 4 ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.


ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಶೇಂಗಾ ಎಣ್ಣೆಯನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕಚ್ಚಾ ಶೇಂಗಾ ಎಣ್ಣೆಯ ರೂಪದಲ್ಲಿ ಖರೀದಿಸಿ, ನಂತರ ಮರುಪ್ಯಾಕಿಂಗ್ ಮಾಡಿ ‘ಕೋಲ್ಡ್ ಪ್ರೆಸ್ಡ್ ಗ್ರೌಂಡ್‌ನಟ್ ಆಯಿಲ್’ (Cold Pressed Groundnut Oil) ಎಂದು ಲೇಬಲ್ ಅಂಟಿಸಿ ಮಾರಾಟಕ್ಕೆ ಸಿದ್ಧಪಡಿಸಲಾಗುತ್ತಿತ್ತು ಎನ್ನಲಾಗಿದೆ.
ಕಚ್ಚಾ ಶೇಂಗಾ ಎಣ್ಣೆಯನ್ನು ಕೋಲ್ಡ್ ಪ್ರೆಸ್ಡ್ ಎಣ್ಣೆ ಎಂದು ಬಿಂಬಿಸುವ ಮೂಲಕ ಗ್ರಾಹಕರಿಗೆ ತಪ್ಪು ಮಾಹಿತಿ ನೀಡುವ ಹಾಗೂ ಆಹಾರ ಉತ್ಪನ್ನಗಳ ಲೇಬಲಿಂಗ್ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಈ ಜಪ್ತಿ ಕ್ರಮ ಕೈಗೊಳ್ಳಲಾಗಿದೆ.

