ಬಿಜೆಪಿ ರಾಷ್ಟೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ರವರ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿದರೆಂಬ ಆರೋಪದ ಹಿನ್ನಲೆಯಲ್ಲಿ ಸೌಜನ್ಯ ಪರ ಹೋರಾಟಗಾರ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸರು ಉಜಿರೆಯ ಅವರ ನಿವಾಸದಿಂದ ಬಂಧಿಸಿದರು .ನಂತರ ಕಾನೂನಿನಂತೆ ವೈದ್ಯಕೀಯ ಪರೀಕ್ಷೆಯ ನಂತರ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.ವ್ಯಕ್ತಿಯೊಬ್ಬರ ಬಗ್ಗೆ ಸಾರ್ವಜನಿಕವಾಗಿಯೋ ಸಾಮಾಜಿಕ ಜಾಲತಾಣಗಳ ಮೂಲಕವೋ ನಿಂದಿಸಿ ಅಪಮಾನ ಮಾಡಿದರೆ ಈ ರೀತಿಯ ಕ್ರಮಗೊಳ್ಳುವುದು ಉಚಿತ .ಆದರೆ ಸರಕಾರವು ಕೈಗೊಳ್ಳುವ ಕಾನೂನು ಕ್ರಮವು ಎಲ್ಲರಿಗೂ ಒಂದೇ ರೀತಿಯಾಗಿರಬೇಕು ಎಂಬುವುದು ಸಾರ್ವಜನಿಕರ ಅಭಿಪ್ರಾಯ ವಾಗಿದೆ
.ಯಾಕೆಂದರೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಸಾರ್ವಜನಿಕ ಸಭೆಯೊಂದರಲ್ಲಿ ಬಹಿರಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 24 ಕೊಲೆ ಆರೋಪ ಮಾಡಿ ಸಾರ್ವಜನಿಕವಾಗಿ ಮುಖ್ಯಮಂತ್ರಿಯೊಬ್ಬರನ್ನು ನಿಂದಿಸಿದರೂ ಅವರ ವಿರುದ್ಧ ಸರಕಾರ ,ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಮೃದು ನೀತಿ ಅನುಸರಿಸುತ್ತಿರುವುದು ಸಾರ್ವಜನಿಕರಿಗೆ ಸಂಶಯಕ್ಕೆ ಕಾರಣವಾಗಿದೆ.ಕರ್ನಾಟಕ ಕಾಂಗ್ರೆಸ್ ಸರಕಾರ ಶಾಸಕರೊಬ್ಬರು ಕೊಲೆ ಆರೋಪ ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಯಿತೇ ? ಅಥವಾ ಬಿಜೆಪಿ ಕಾಂಗ್ರೆಸ್ ಮಧ್ಯೆ ಚೌಕಶಿ ರಾಜಕಾರಣವೇ ಎಂಬುವುದು ಪ್ರಜ್ಞಾ ವಂತರಿಗೆ ಕಾಯುತ್ತಿರುವ ಯಕ್ಷ ಪ್ರಶ್ನೆಯಾಗಿದೆ.
ಬಿಜೆಪಿ ರಾಷ್ಟೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ರವರ ವಿರುದ್ಧ ನಿಂದಿಸಿದವರಿಗೆ ಶಿಕ್ಷೆ ಕೊಡುವಲ್ಲಿ ಸರಕಾರ , ಪೊಲೀಸ್ ಇಲಾಖೆ ತೋರಿಸಿದ ಮುತುವರ್ಜಿ ಆವೇಶ ,ಆತುರ ಇವೆಲ್ಲವೂ ಮುಖ್ಯಮಂತ್ರಿಯ ಬಗ್ಗೆ ಹೇಳಿಕೆ ನೀಡಿ ಅಪಮಾನ ಮಾಡಿದವರಿಗೆ ಇಲ್ಲವೇ ? ಅಂದರೆ ರಾಷ್ಟೀಯ ಪಕ್ಷದ ಪ್ರಧಾನ ಕಾರ್ಯದರ್ಶಿ ಯವರಿಗಿಂತಲೂ ಮುಖ್ಯಮಂತ್ರಿಯ ಸ್ಥಾನಮಾನ ಕಿರಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಕರ್ನಾಟಕ ಸರಕಾರ ,ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸ್ಪಷ್ಟೀಕರಣ ನೀಡಬೇಕಾಗಿದೆ.ಇಲ್ಲದಿದ್ದಲ್ಲಿ ಸರಕಾರದ ಇಬ್ಬಗೆಯ ನೀತಿ ಹಾಗೂ ಒಡಂಬಡಿಕೆಯ ರಾಜಕಾರಣ ಬಯಲಾಗುವುದು ಖಚಿತ .ಮುಖ್ಯಮಂತ್ರೀಯ ವಿರುದ್ಧ ಕೊಲೆ ಆರೋಪ ಮಾಡಿದವರು ಸೇಫ್ ರಾಜಕೀಯ ನಾಯಕರೊಬ್ಬರ ಮೇಲೆ ಆರೋಪ ಮಾಡಿದವರಿಗೆ ಜೈಲ್ .ಇದು ಯಾವ ನ್ಯಾಯ? ‘ಅಂದರೆ ಕಾನೂನಿನ ಎದುರು ಎಲ್ಲರೂ ಸಮಾನರು’ಎಂಬುವುದು ಮರೀಚಿಕೆಯೇ ?
ನ್ಯಾಯಾಂಗ ಬಂಧನದಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಇದಕ್ಕೆ ಸಮರ್ಥನೆ ನೀಡಿದ ತಿಮರೋಡಿ ನಾನು ಹರೀಶ್ ಪೂಂಜಾರವರ ಆರೋಪವನ್ನೇ ಪುನರಾವರ್ತನೆ ಮಾಡಿದ್ದು ಎಂದಿದ್ದಾರೆ.ಅಂತೂ ಇಂತೂ ರಾಜಕಾರಣದಲ್ಲಿ ಶತ್ರುಗಳು ಯಾವಾಗ ಬೇಕಾದರೂ ಮಿತ್ರರಾಗಬಹುದು ,ಮಿತ್ರರು ಶತ್ರುಗಳಾಗಬಹುದು .ಇದಕ್ಕೆಲ್ಲ ಕಾರಣ ತಮ್ಮ ಸ್ವಾರ್ಥ ಸಾಧನೆ .