ಅಸ್ತ್ರ ಗ್ರೂಪ್ ಮತ್ತು ಶರಧಿ ಪ್ರತಿಷ್ಠಾನದ ಆಶ್ರಯದಲ್ಲಿ ಪುಟಾಣಿ ಮಕ್ಕಳಿಗೆ ಮಣ್ಣಿನ ಗಣಪತಿ ಸ್ಪರ್ಧೆ 27 ರಂದು ಮಧ್ಯಾಹ್ನ 2 ರಿಂದ 3:30 ಕ್ಕೆ ಲಾಲ್ ಭಾಗ್ ಸ್ಕೌಟ್ ಆಂಡ್ ಗೈಡ್ ಭವನದಲ್ಲಿ ನಡೆಯಲಿದೆ.ಈ ಸ್ಪರ್ಧೆಯಲ್ಲಿ 5 ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುವುದು .
.ಸ್ಪರ್ಧೆಗಳು ನಿಯಮ ಸೂಚಿ ಮತ್ತು ಮಾನದಂಡದ ಆಧಾರದಲ್ಲಿ ನಡೆಯಲಿದೆ.ಸ್ಪರ್ಧೆಯ ನೋಂದಣಿ ಆಗಸ್ಟ್ 25 ಕ್ಕೆ ಕೊನೆಯ ದಿನ .ಸ್ಪರ್ದಿಗಳು ಮಣ್ಣನ್ನು ತರಲು ಅವಕಾಶವಿದೆ.ರಾಸಾಯನಿಕ ಬಣ್ಣಗಳನ್ನು ಬಳಸುವಂತಿಲ್ಲ .ಬದಲಿಗೆ ನೈಸರ್ಗಿಕ ಬಣ್ಣಗಳನ್ನು ಬಳಸಿ ಅರಶಿನ, ಕುಂಕುಮ ಮತ್ತು ಇತರ ನೈಸರ್ಗಿಕ ವಸ್ತುಗಳಿಂದ ಮಾಡಿದ ಬಣ್ಣಗಳನ್ನು ಬಳಸಬೇಕು .ಅಲಂಕಾರಕ್ಕೆ ಮಣ್ಣು ಅರಶಿನ ,ಕುಂಕುಮ ,ಅಕ್ಕಿಹಿಟ್ಟು ,ಹೂವು , ಎಲೆಗಳು ,ಹಣ್ಣುಗಳು ಮುಂತಾದ ನೈಸರ್ಗಿಕ ವಸ್ತುಗಳನ್ನು ಬಳಸಿ ಮೂರ್ತಿಗಳನ್ನು ಅಲಂಕರಿಸಬೇಕು ಎಂದು ಸಂಘಟಕರು ತಿಳಿಸಿದ್ದಾರೆ..