‘ಬದ್ರಿಯಾ ಅಲುಮಿನಿ ಅಸೋಸಿಯೇಷನ್ ‘ ಬದ್ರಿಯಾ ಹಳೆ ವಿದ್ಯಾರ್ಥಿಗಳ ಸಮಾವೇಶ ಸೆಪ್ಟೆಂಬರ್19 ರಂದು

ಮಂಗಳೂರಿನ ಪ್ರತಿಷ್ಠಿತ ಬದ್ರಿಯಾ ವಿದ್ಯಾಸಂಸ್ಥೆ 1928ರಲ್ಲಿ ಸ್ಥಾಪನೆಗೊಂಡು 2028ರಲ್ಲಿ ಸಂಸ್ಥೆಯು ಶತಮಾನೋತ್ಸವ ಆಚರಿಸಲಿದೆ . ಇದರ ಪೂರ್ವ ತಯಾರಿಯ ಭಾಗವಾಗಿ ಬದ್ರಿಯಾ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘ ‘ಬದ್ರಿಯಾ ಅಲುಮಿನಿ ಅಸೋಸಿಯೇಷನ್ ‘ ನನ್ನು ರೂಪಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್19 ರಂದು ಬದ್ರಿಯಾ ಹಳೆ ವಿದ್ಯಾರ್ಥಿಗಳ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಹಮ್ಮದ್ ಕುಂಞ ತಿಳಿಸಿದರು .

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು , ಬದ್ರಿಯಾ ಹಳೆ ವಿದ್ಯಾರ್ಥಿಗಳ ಸಮಾವೇಶವು ಸಂಜೆ 4:00ರಿಂದ 6:00 ಗಂಟೆ ತನಕ ಬದ್ರಿಯಾ ಕ್ಯಾಂಪಸ್‌ನಲ್ಲಿ ನಡೆಯಲಿರುವುದು . ಇದರಲ್ಲಿ ದೇಶ-ವಿದೇಶಗಳಿಂದ ಹಳೆ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಬದ್ರಿಯಾ ವಿದ್ಯಾಸಂಸ್ಥೆಯ ಸಮಗ್ರ ಅಭಿವೃದ್ಧಿ ಮತ್ತು ವಿವಿಧ ಯೋಜನೆಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು .

ಬದ್ರಿಯಾ ವಿದ್ಯಾಸಂಸ್ಥೆಯಲ್ಲಿ ಯುಕೆಜಿ ತರಗತಿಯಿಂದ ಡಿಗ್ರಿ ತನಕ ವಿವಿಧ ಕೋರ್ಸ್‌ಗಳಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಈ ಸಂಸ್ಥೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ಯಶಸ್ವಿ ಉದ್ಯಮಿಗಳಾಗಿ, ಉನ್ನತ ಹುದ್ದೆಯ ಉದ್ಯೋಗಿಗಳಾಗಿ ಹಾಗೂ ಇನ್ನಿತರ ಪ್ರಮುಖ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ .

ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರತಿಗಳಾದ ಫಾರೂಕ್ ಎಸ್ ಎಂ , ಖಲೀಲ್ , ಮುಖ್ತಾರ್ , . ಶಹೀದ್ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!