ವಿಶ್ವ ಹೃದಯ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆ ವತಿಯಿಂದ ‘ವಿಶ್ವ ಹೃದಯ ದಿನದ ವಾಕಥಾನ್’ ಸೆ. 21ಕ್ಕೆ

ಮಂಗಳೂರು: ಮಂಗಳೂರಿನ ಕೆಎಂಸಿ ಆಸ್ಪತ್ರೆಯು ವಿಶ್ವ ಹೃದಯ ದಿನದ ಅಂಗವಾಗಿ ಸೆ.21ರಂದು ‘ವಿಶ್ವ ಹೃದಯ ದಿನದ ವಾಕಥಾನ್-2025’ (“World Heart Day Walkathon 2025”) ಅನ್ನು ಆಯೋಜಿಸುವುದಾಗಿ ಆಸ್ಪತ್ರೆಯ ಡೀನ್ ಡಾ.ಉಣ್ಣಿಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಕುರಿತು ಮಾಹಿತಿ ನೀಡಿದ ಕೆಎಂಸಿ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಪೈ ಅವರು, ‘ಒಂದು ಬೀಟ್ ಕೂಡ ತಪ್ಪಿಸಿಕೊಳ್ಳಬೇಡಿ’ ಎನ್ನುವುದು ಈ ವರ್ಷದ ವಿಶ್ವ ಹೃದಯ ದಿನದ ಥೀಮ್ ಆಗಿದೆ. ಹೃದಯ ಕಾಯಿಲೆಗಳ ಪ್ರಮಾಣವು, ವಿಶೇಷವಾಗಿ ಯುವಕರಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ. ನಿಯಮಿತ ಆರೋಗ್ಯ ತಪಾಸಣೆ, ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಪದ್ಧತಿ ಹೃದಯ ರಕ್ಷಣೆಗೆ ಅಗತ್ಯ ಎಂದು ಹೇಳಿದರು.

ಡಾ. ಎಂ ಎನ್ ಭಟ್ ಮಾತನಾಡಿ, ವಾಕಥಾನ್ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಆರೋಗ್ಯಕರ ಜೀವನಶೈಲಿಗೆ ಪ್ರೇರೇಪಿಸುತ್ತದೆ. ಈ ಬಾರಿ ರಾಷ್ಟ್ರೀಯ ಚಿನ್ನದ ಪದಕ ವಿಜೇತ ಈಜುಗಾರ ಮಾಸ್ಟರ್ ಯಶಸ್ ಟೋಸ್ಟ್ ಬೇರರ್ ಆಗಿ ಭಾಗವಹಿಸಲಿದ್ದಾರೆ” ‘ಭಾಗವಹಿಸುವವರನ್ನು ಕೆಂಪು ಬಟ್ಟೆ ಧರಿಸಲು ಪ್ರೋತ್ಸಾಹಿಸಲಾಗುತ್ತಿದ್ದು, ಅತ್ಯುತ್ತಮ ಗುಂಪು ಪಾಲ್ಗೊಳ್ಳಿಕ, ಅತ್ಯಂತ ಉತ್ಸಾಹಿ ಭಾಗವಹಿಸುವವರು, ಘೋಷಣೆ ಕೂಗುವಿಕೆ ಹಾಗೂ ಫಲಕ ಪ್ರದರ್ಶನ ವಿಭಾಗಗಳಲ್ಲಿ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ವಾಕಥಾನ್ ನಂತರ ಉಪಾಹಾರ ಮ ಸಾರಿಗೆ ಸೌಲಭ್ಯ ಒದಗಿಸಲಾಗುವುದು. ಕಳೆದ ವರ್ಷ 1000 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು, ಈ ವರ್ಷ ಇನ್ನಷ್ಟು ಸಂಖ್ಯೆಯನ್ನು ನಿರೀಕ್ಷಿಸುತ್ತಿದ್ದೇವೆ” ಎಂದು ವಿವರಿಸಿದರು

.ವಾಕಥಾನ್ ಸೆಪ್ಟೆಂಬರ್ 21, ಭಾನುವಾರ ಬೆಳಿಗ್ಗೆ 6.30ಕ್ಕೆ ಕೆಎಂಸಿ ಆಸ್ಪತ್ರೆ ಡಾ. ಬಿ.ಆರ್. ಅಂಬೇಡ್ಕ‌ರ್ ವೃತ್ತದಿಂದ ಪ್ರಾರಂಭವಾಗಿ, ಬಲ್ಮಠ ರಸ್ತೆ, ತಾಜ್ ಮಹಲ್, ಮಿಲಾಗ್ರಿಸ್ ಚರ್ಚ್, ಐಎಂಎ ಹಾಲ್ ಅತ್ತಾವರ ಹಾಗೂ ಎಸ್‌ಎಲ್ ಮಥಿಯಾಸ್‌ ರಸ್ತೆಯ ಮೂಲಕ ಸಾಗಿಕೊಂಡು ಮರೇನಾ ಕ್ರೀಡಾ ಸಂಕೀರ್ಣದಲ್ಲಿ ಮುಕ್ತಾಯಗೊಳ್ಳಲಿದೆ. ಮಂಗಳೂರು ಉಪ ಪೊಲೀಸ್ ಆಯುಕ್ತ ಮಿಥುನ್ ಎಚ್.ಎನ್. (ಐಪಿಎಸ್) ವಾಕಥಾನ್‌ಗೆ ಚಾಲನೆ ನೀಡಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ . ಮಾಧವ್ ಕಾಮತ್ , ಡಾ. ಹರೀಶ್ ರಾಘವನ್ , ಡಾ ಐರಿಶ್ ಶೆಟ್ಟಿ , ಡಾ ಎಂ ಎನ್ ಭಟ್ ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!