ಮಂಗಳೂರು: ರಾಜ್ಯದಲ್ಲಿ ಹಿಂದುಳಿದ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ತೀರ್ಮಾನಿಸಿದ್ದು ರಾಜ್ಯದಲ್ಲಿರುವ ಮರಾಠ ಸಮುದಾಯ ಬಾಂಧವರು ಧರ್ಮವನ್ನು ಹಿಂದು ಎಂದು, ಜಾತಿಯನ್ನು ಮರಾಠವೆಂದು , ಉಪ ಜಾತಿಯನ್ನು ಕುಣುಬಿ ಎಂದು , ಮಾತೃ ಭಾಷೆಯನ್ನು ಮರಾಠಿ ಎಂದು ಸಮೀಕ್ಷೆಗೆ ಬರುವಾಗ ನಮೂದಿಸಬೇಕೆಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ರಾವ್ ಕೋರಿಕೊಂಡರು.
ಅವರು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಕೇರಳ ಮತ್ತು ಇತ್ತರ ಕೆಲವು ಕಡೆಗಳಲ್ಲಿ ಮರಾಠ ಜನಾಂಗದವರು ಆರ್ಯ ಎಂಬುದಾಗಿ ಕರೆಸಿಕೊಳ್ಳುತ್ತಾರೆ. ಕಾಲಾನಂತರದಲ್ಲಿ ಅವರು ವಿವಿಧ ಉದ್ದೇಶಗಳಿಗಾಗಿ ಕರ್ನಾಟಕಕ್ಕೆ ಬಂದು ನೆಲೆಸುತ್ತಾರೆ . ಈ ಭಾಗಕ್ಕೆ ಆಗಮಿಸಿದ ಆರ್ಯರು ರಾಜ್ಯ ಸಮೀಕ್ಷೆಯ ಸಮಯದಲ್ಲಿ ಆರ್ಯ ಮತ್ತು ಮರಾಠ ಎನ್ನುವ ಎರಡು ಜಾತಿ ಕಾಲಂನಿಂದ ಗೊಂದಲ ಪಡದೆ ಆರ್ಯರು ಮರಾಠವೆಂದು ನಮೂದಿಸಿಕೊಳ್ಳಬೇಕೆಂದು ಕೋರಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ ನ ಮುಖಂಡರಾದ ಎಬಿ ಚಂದ್ರಶೇಖರ್, ನಾಗೇಶ್ ಎನ್ ಪಾಟೀಲ್, ಗುರುರಾಜ್ , ಭಾಗ್ಯಲಕ್ಷ್ಮಿ ಸುಧಾಕರ್ ಸಿಂಧ್ಯಾ ಮುಂತಾದವರು ಉಪಸ್ಥಿತತರಿದ್ದರು.