ಜಿ ಎಸ್ ಟಿ ಕಡಿತ ಇಂದಿನಿಂದ ಅನ್ವಯ – ಬಿಜೆಪಿ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಸಂಭ್ರಮ.

ಮಂಗಳೂರು: ಕೇಂದ್ರ ಸರಕಾರವು ನವರಾತ್ರಿಯ ಈ ವಿಶೇಷ ಸಂದರ್ಭದಲ್ಲಿ ಜಿ ಎಸ್ ಟಿ ಯನ್ನು ಕಡಿಮೆ ಮಾಡಿದ್ದು ದೇಶದ ಹಿತದ ದೃಷ್ಟಿಯಿಂದ ಒಳಿತಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಹರ್ಷ ವ್ಯಕ್ತಪಡಿಸಿದರು .

ಅವರು ಜಿಲ್ಲಾ ಬಿಜೆಪಿ ಕಛೇರಿಯ ವ್ಯಾಪ್ತಿಯಲ್ಲಿ ನಡೆದ GST ಕಡಿತ ಸಂಭ್ರಮದಲ್ಲಿ ಮಾತನಾಡಿ , ನಿನ್ನೆಯ ದಿನ ಪ್ರಧಾನಿ ಮೋದಿಯವರು ಹೇಳಿದಂತೆ ‘ಇಂದಿನಿಂದ ಭಾರತದಾದಂತ್ಯ ಸರಕು ಮತ್ತು ಸೇವಾ ತೆರಿಗೆಗಳ ದರ ಕಡಿತವಾಗಲಿದ್ದು ಇದು ಜನರ ಅಭಿವೃದ್ಧಿಗೆ ಸಹಕಾರಿಯಾಗಲಿದೆ . ಜಿ ಎಸ್ ಟಿ ಯನ್ನು ಹಿಡಿದು ಕಾಂಗ್ರೆಸ್ ಸರಕಾರ ಬಿಜೆಪಿ ಸರಕಾರವನ್ನು ನಿರಂತರ ಟೀಕೆ ಮಾಡ್ತಾ ಇದ್ರೂ , ಆದರೆ ಅದಕ್ಕೆಲ್ಲಾ ಮೋದಿಜಿಯವರು ಜಿ ಎಸ್ ಟಿ ಯನ್ನು ಕಡಿತ ಮಾಡುವ ಮುಖೇನ ಉತ್ತರವನ್ನು ನೀಡಿದ್ದಾರೆ .ಇದು ಬಡ ಮತ್ತು ಮಧ್ಯಮ ವರ್ಗದ ಜನರ ಪಾಲಿನ ಆಶಾ ಕಿರಣವಾಗಲಿದೆ . ದಿನ ಉಪಯೋಗಿ ವಸ್ತುಗಳ ಬೆಲೆಗಳು ಇಂದಿನಿಂದ ಕಡಿಮೆ ಅಗಲಿದ್ದು ಇದು ನಾಗರೀಕರಿಕರಿಗೆ ಸಹಕಾರಿ ಆಗಲಿದೆ ಎಂದರು .

ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ , ಹಬ್ಬದ ಉಡುಗೆರೆಯಾಗಿ ಜಿ ಎಸ್ ಟಿ ಯನ್ನು ದೇಶದಾದಂತ್ಯ ಇಂದು ಕಡಿಮೆ ಮಾಡುವ ಮುಖೇನ ನರೇಂದ್ರ ಮೋದಿಯವರ ನೇತ್ರಿತ್ವದ ಕೇಂದ್ರ ಸರಕಾರ ದೇಶದ ಜನರಿಗೆ ಶುಭ ಸುದ್ದಿಯನ್ನು ನೀಡಿದೆ .

ದಿನ ನಿತ್ಯ ಬಳಕೆ ಮಾಡುವ ೯೯ ಕ್ಕೂ ಅಧಿಕ ಶೇಕಡಾ ವಸ್ತುಗಳ ಬೆಲೆಯು ಇಳಿಕೆಯನ್ನು ಕಾಣಲಿದ್ದು ಇದು ಜನ ಸಾಮಾನ್ಯರಿಗೆ ಸಂತಸವನ್ನು ತರುವ ಜೊತೆಗೆ ಜನರ ಖರ್ಚನ್ನು ಕಡಿಮೆ ಮಾಡಲಿದೆ . ಇದರಿಂದ ನೇರವಾದ ಉಳಿತಾಯ ಆಗಲಿದೆ . ಈ ಸಂಭ್ರಮವನ್ನು ಭಾರತೀಯ ಜನತಾ ಜನಪ್ರತಿನಿದಿಗಳು , ಕಾರ್ಯಕರ್ತರು ಮುಂದಿನ ಒಂದು ವಾರ ಉಳಿತ್ತಾಯ ಉತ್ಸಸವಾಗಿ ಆಚರಿಸಲಿದೆ . ಜಿ ಎಸ್ ಟಿ ಇಳಿಕೆಯ ನಿರ್ಧಾರವು ಆರೋಗ್ಯ ಕ್ಷೇತ್ರ , ಶಿಕ್ಷಣ ಕ್ಷೇತ್ರ , ಬಡ ವರ್ಗದ ಜನರಿಗೆ ಸಹಕಾರಿ ಆಗಲಿದೆ .

ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ , ೯೯ ಕ್ಕೂ ಅಧಿಕ ಶೇಕಡಾ ವಸ್ತುಗಳ ಬೆಲೆ ಇಳಿಕೆ ಆಗಲಿದೆ , ೫೭೫ ವಸ್ತುಗಳ ಜಿ ಎಸ್ ಟಿ ಕಡಿತವಾಗಿದೆ . ೧೮ ಶೇಕಡಾ ೧೨ ಸ್ಲಾಬ್ ಗಳಿದ್ದುದ್ದನು ೦ – ೫ ಸ್ಲಾಬ್ ಗೆ ತರಲಾಗಿದ್ದುದರಿಂದ ದೊಡ್ಡ ಮಟ್ಟದಲ್ಲಿ ಬೆಲೆಯೂ ಕಡಿಮೆ ಆಗಿದೆ .

ಕಾರ್ಯಕ್ರಮವನ್ನು ಬಿಜೆಪಿ ಮುಖಂಡರು , ಕಾರ್ಯಕರ್ತರು ಸಿಹಿ ಹಂಚುವ ಮುಖೇನ ಆಚರಿಸಿಕೊಂಡರು . ಕಾರ್ಯಕ್ರಮದಲ್ಲಿ ಶಾಸಕರಾದ ಉಮಾನಾಥ್ ಕೋಟ್ಯಾನ್ , ಭಾಗೀರಥಿ ಮುರುಳ್ಯ , ಬಿಜೆಪಿ ಮುಖಂಡರಾದ ಸಂಜಯ್ ಪ್ರಭು , ಪ್ರೇಮಾನಂದ ಶೆಟ್ಟಿ ಮುಂತಾದವರು ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!