ಬಂಟ್ವಾಳ: ಖಾಸಗಿ ಬಸ್ ಒಂದರ ಸ್ಟೇರಿಂಗ್ ನ ದೋಷ ದಿಂದಾಗಿ ಜೀಪ್ ಗೆ ಡಿಕ್ಕಿ ಹೊಡೆದ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಜೀಪ್ ಚಾಲಕನಿಗೆ ಗಾಯವಾಗಿದ್ದು ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಜಗನ್ನಾಥ ಎಂಬವರು ಜೀಪ್ ಚಲಾಯಿಸಿಕೊಂಡು ಬಂಟ್ವಾಳದಿಂದ ಮೂಡಬಿದರೆಗೆ ಹೋಗುತ್ತಿರುವ ವೇಳೆ ವೇಣೂರು ನಮನ ಕ್ಲಿನಿಕ್ ಬಳಿ ಬೆಳ್ತಂಗಡಿ ಕಡೆಯಿಂದ ಮೂಡಬಿದರೆಗೆ ಬರುವ ಬಸ್ ನ ಸ್ಟೇರಿಂಗ್ ನಲ್ಲಿ ತಾಂತ್ರಿಕ ದೋಷಗಳು ಉಂಟಾಗಿ ಚಾಲಕನ ನಿಯಂತ್ರಣ ಬಾರದೆ ಬಸ್ ಎದುರುಕಡೆಯಿಂದ ಬರುತ್ತಿದ್ದ ಜೀಪಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಜೀಪಿನ ಚಾಲಕ ಬದಿ ಸಂಪೂರ್ಣ ಜಖಂಗೊಂಡಿದ್ದು ,ಚಾಲಕ ಜಗನ್ನಾಥ ಶೆಟ್ಟಿ ಅವರಿಗೆ ಕೈಗೆ ಹಾಗೂ ಇತರ ಭಾಗದಲ್ಲಿ ಗಾಯಗಳಾಗಿವೆ ಎಂದು ಹೇಳಲಾಗಿದೆ.ವೇಣೂರು ಎಸ್.ಐ.ಅಕ್ಷಯ್ ಅವರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ