ಮಂಗಳೂರು: ಚರಂಡಿಗೆಂದು ತೆರದ ಗುಂಡಿ ದಿನಗಳೇ ಕಳೆದಿದೆ. ಆದರೂ ಅದನ್ನು ಮುಚ್ಚದೆ ಹಾಗೇ ಬಿಡಲಾಗಿದ್ದು ಇದೀಗಾ ಅಲ್ಲಿ ನೀರು ಕಟ್ಟಿ ನಿಂತು ಸಾಂಕ್ರಾಮಿಕ ರೋಗಕ್ಕೆ ಎಡೆ ಮಾಡಿ ಕೊಡ್ತಾ ಇದೆ . ಈ ಸಾಂಕ್ರಾಮಿಕ ರೋಗದ ಸಂಗ್ರಹಕ ನೀರನ್ನು ಕಟ್ಟಿ ನಿಂತಿರುವ ಸ್ಥಳ ಇರುವುದು ನಗರದ ವೆನ್ಲಾಕ್ ಆಸ್ಪತ್ರೆಯ ಹಿಂಬದಿಗೆ . ಇದೇ ಮಾರ್ಗವಾಗಿ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಹೋಗುವವರು , ನಗರಕ್ಕೆ ಬರುವವರು ಸಂಚರಿಸ್ತಾ ಇರುತ್ತಾರೆ .
ಮಳೆಯಿಂದ ಕಟ್ಟಿನಿಂತ ಈ ನೀರು ಕೊಳಕಾಗಿದ್ದು ಸೊಳ್ಳೆಗಳ ಉಲ್ಬಣಕ್ಕೆ ಕರಣವಾಗಗುವ ಕಾರಣವಾಗಲಿದೆ . ಇದು ಮಂಗಳೂರು ಮಹಾ ನಗರ ಪಾಲಿಕೆಯ ನಿರ್ಲಕ್ಷವನ್ನು ಸಾರುತ್ತದೆ . ಈ ಪ್ರದೇಶವು ಕೊಳಕಿನಿಂದ ನಾರುತ್ತಿದೆ. ಪಾದಚಾರಿಗಳಿಗೆ ಇದು ಸಮಸ್ಯೆಯ ಅಡ್ಡೆಯಾಗಿದೆ .