ನವೆಂಬರ್ 9 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವಿಶುಕುಮಾ‌ರ್ ತುಳು ಸಾಹಿತ್ಯೋತ್ಸವ – ಪ್ರಶಸ್ತಿ ಪ್ರಧಾನ

ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ, ಸಸಿಹಿತ್ಲು ಘಟಕದ ಆತಿಥ್ಯದಲ್ಲಿ , ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಕಾರದೊಂದಿಗೆ , ವಿಶುಕುಮಾರ್ ದತ್ತಿನಿಧಿ ಸಂಚಾಲನ ಸಮಿತಿ ಸಹಯೋಗದಲ್ಲಿ ವಿಶುಕುಮಾ‌ರ್ ತುಳು ಸಾಹಿತ್ಯೋತ್ಸವ ಕಾರ್ಯಕ್ರಮವು ನವೆಂಬರ್ 9 ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬೆಳ್ಳಿಗೆ 8. ರಿಂದ ಸಂಜೆ 6 ಗಂಟೆಯ ತನಕ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ನಟನಾಗಿ, ನಿರ್ದೇಶಕನಾಗಿ, ಕಥೆ, ಕಾದಂಬರಿಕಾರರಾಗಿ, ಸಾಹಿತಿ, ಪತ್ರಕರ್ತರಾಗಿ, ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಮಾಡಿ. ಕರಾವಳಿ, ವಿಪ್ಲವ, ಕಪ್ಪುಸಮುದ್ರ, ನೆತ್ತರಗಾನದಂತಹ 12 ಸಾಹಿತ್ಯಕೃತಿಗಳನ್ನು ನೀಡಿ. ಕೋಟಿಚೆನ್ನಯ್ಯದಂತಹ ಅಪೂರ್ವ ಸಿನಿಮಾ ನೀಡಿ ಐವತ್ತು ವರುಷಗಳ ಕಾಲ ಕನ್ನಡ ಸಾರಸ್ವತ ಲೋಕದಲ್ಲಿ ಮಿಂಚಿ ಮರೆಯಾದ ಅಗ್ರಮಾನ್ಯ ಸಾಹಿತಿ ವಿಶುಕುಮಾರ್ ಇವರ ನೆನಪಿಗಾಗಿ ಯುವವಾಹಿನಿ ಸಂಸ್ಥೆಯು, ವಿಶುಕುಮಾರ್ ದತ್ತಿನಿಧಿಯನ್ನು ಸ್ಥಾಪಿಸಿ ಅರ್ಹ ಸಾಹಿತ್ಯ ಸಾಧಕರಿಗೆ ಕಳೆದ 23 ವರುಷದಿಂದ ವಿಶುಕುಮಾರ್ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ . ಈ ಭಾರಿ ಸಾಹಿತ್ಯ ಸಂಶೋಧನೆ ಮತ್ತು ಜಾನಪದ ಅಧ್ಯಯನ ಕ್ಷೇತ್ರದ ಸಾಧನೆಯನ್ನು ಮಾಡಿದ ಹಿರಿಯ ಸಾಹಿತಿ ಬೆನೆಟ್ ಜಿ ಅಮ್ಮಣ್ಣ ಅವರನ್ನು ಸನ್ಮಾನಕ್ಕೆ ಆಯ್ಕೆ ಮಾಡಲಾಗಿದ್ದು . ಪ್ರಶಸ್ತಿಯು ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿರಲಿದೆ ಎಂದು ತಿಳಿಸಿದರು .

ಈ ಸಾಹಿತ್ಯೋತ್ಸವದ ಪೂರ್ವಭಾವಿಯಾಗಿ ಮೂರು ದಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತುಳು ಭಾಷೆಯಲ್ಲಿ ಭಾಷಣ, ಪ್ರಬಂಧ ಸ್ಪರ್ಧೆ ನಡೆಯಲಿದೆ . ಸಾಹಿತ್ಯೋತ್ಸವದ ದಿನ ಯುವವಾಹಿನಿ ಸದಸ್ಯರಿಗೆ ಕುಣಿತ ಭಜನಾ ಸ್ಪರ್ಧೆ ಇದರ ಜೊತೆಗೆ ಪುಸ್ತಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಯುವ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ ಎಂದರು . ತುಳು ಸಾಹಿತ್ಯ ಕ್ಷೇತ್ರದ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು .

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಬಾಬು ಪೂಜಾರಿ ಸದಸ್ಯರಾದ ಟಿ.ಶಂಕರ್ ಸುವರ್ಣ , ರಶ್ಮಿ ಸಿ ಕರ್ಕೇರಾ , ಸರಸ್ವತಿ ಎಸ್‌ ಕೂಳೂರು , ಮುದ್ದು ಮೂಡುಬೆಳ್ಳೆ , ಪ್ರದೀಪ್ ಸಸಿಹಿತ್ಲು ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!