ನವೆಂಬರ್ 28 ರಂದು ಬಹ್ರೈನ್‌ನಲ್ಲಿ ‘ಕರ್ನಾಟಕ ರಾಜ್ಯೋತ್ಸವ ಸಂಭ್ರಮ 2025’ ಕಾರ್ಯಕ್ರಮ

ಮಂಗಳೂರು: ನವೆಂಬರ್ 28 ರಂದು ಸಂಜೆ 5 ಗಂಟೆಗೆ ಬಹ್ರೈನ್‌ನ ಇಂಡಿಯನ್ ಕ್ಲಬ್ ಓಪನ್ ಗ್ರೌಂಡ್ ನಲ್ಲಿ ‘ಕರ್ನಾಟಕ ರಾಜ್ಯೋತ್ಸವ ಸಂಭ್ರಮ 2025’ ಕಾರ್ಯಕ್ರಮ ನಡೆಯಲಿದೆ ಎಂದು NRI ಬಹ್ರೈನ್‌ ಫೋರಮ್ ಇದರ ಅಧ್ಯಕ್ಷರಾದ ರಾಜ್ ಕುಮಾರ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , NRI ಫೋರಮ್ ನನ್ನು ಕರ್ನಾಟಕ- ಬಹ್ರೈನ್‌ ಮೂಲಕ ಆಯೋಜಿಸಲಾದ ಈ ಸಾಂಸ್ಕೃತಿಕ ಉತ್ಸವವು ಕರ್ನಾಟಕದ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಕಲೆಯ ಭವ್ಯ ಪ್ರದರ್ಶನವಾಗಿದ್ದು, ಸಾಂಪ್ರದಾಯಿಕ ಮತ್ತು ಆಧುನಿಕ ಕಲಾ ರೂಪಗಳ ಮಿಶ್ರಣದ ಮೂಲಕ ಕನ್ನಡದ ಸಾಂಸ್ಕೃತಿಕ ವೈಭವವನ್ನು ಪ್ರತಿಫಲಿಸಲಿದೆ ಎಂದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾನ್ವಿತ ಭಾರತೀಯ ರಾಯಭಾರಿ H.E ವಿನೋದ್ ಕೆ. ಜೇಕಬ್ ಅವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮತ್ತು ಪುತ್ತೂರು ಶಾಸಕರಾದ ಅಶೋಕ್ ರೈ ಭಾಗವಹಿಸಲಿದ್ದಾರೆ. ಬಹ್ರೈನ್‌ ಕನ್ನಡ ರಾಜ್ಯೋತ್ಸವ 2025 ಪ್ರಶಸ್ತಿಯನ್ನು, ಈ ಬಾರಿ ಐದು ಸಾಧಕರು ಮತ್ತು ಒಂದು ಸಂಸ್ಥೆಗೆ ನೀಡುವ ತೀರ್ಮಾನ ಮಾಡಲಾಗಿದೆ ಎಂದರು .

ಕಾರ್ಯಕ್ರಮದಲ್ಲಿ ಬಹ್ರೈನ್‌ನ ಎಲ್ಲಾ ಸಂಘದ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ ಅಲ್ಲದೆ,ಹಲವಾರು ಗಲ್ಫ್ ದೇಶಗಳಿಂದ ಅತಿಥಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಪುಷ್ಕರಾ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದ್ದು, ಖ್ಯಾತ ಹಾಸ್ಯ ಕಲಾವಿದ ರಾಘವೇಂದ್ರ, ಹುಲಿ ಕಾರ್ತಿಕ್ ಮತ್ತು ಚಿಲ್ಲರ್ ಮಂಜುರವರಿಂದ ಹಾಸ್ಯ ಪ್ರದರ್ಶನ: ನಿರ್ದೇಶಕ, ನಟ ಮತ್ತು ಮ್ಯಾಜಿಷಿಯನ್ ಮೂರ್ಲಿಧರ ಕೌಶಿಕ್ ಜಾದೂ ಪ್ರದರ್ಶನ ನೀಡಲಿದ್ದಾರೆ ಎಂದರು .

ಜೊತೆಗೆ ಜನಪದ ಗೀತೆಗಳನ್ನು ಗೋನ ಸ್ವಾಮಿ ಮತ್ತು ಶೈಲಜಾ ಶ್ರೀನಿವಾಸ್ ರವರು ಪ್ರಸ್ತುತಪಡಿಸಲಿದ್ದಾರೆ. ಸ್ಥಳೀಯ ನೃತ್ಯ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಲಿದ್ದು ಕಾರ್ಯಕ್ರಮವನ್ನು ಬೆಂಗಳೂರಿನ ಸ್ವಸ್ತಿಕ ಶೆಟ್ಟಿ ನಿರೂಪಿಸಲಿದ್ದಾರೆ. ಇಂತಹ ವೈಭವದ ಕಾರ್ಯಕ್ರಮದಲ್ಲಿ ಕರ್ನಾಟಕದ ಗಣ್ಯರು, ವೃತ್ತಿಪರರು ಮತ್ತು ಕುಟುಂಬಸ್ಥರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು . ಕಾರ್ಯಕ್ರಮದಲ್ಲಿ ೨೦೦೦ ಕ್ಕೂ ಅಧಿಕ ಅನಿವಾಸಿ ಕನ್ನಡಿಗರು ಭಾಗವಿಸಲಿದ್ದಾರೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಸಂಘದ ಹಿರಿಯ ಸಲಹೆಗಾರ ಆಸ್ಟಿನ್ ಸಂತೋಷ್ , ಸದಸ್ಯರಾದ ಸಂಜೀವ್ ಶೆಟ್ಟಿ ಉಪಸ್ಥಿತತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!