ಮಂಗಳೂರು: ಕಂಪ್ಯೂಟಿಂಗ್, ಸೆಮಿಕಂಡಕ್ಟರ್, ಮೆಕಾಟ್ರಾನಿಕ್ಸ್, ಇಂಟೆಲಿಜೆಂಟ್ ಸಿಸ್ಟಮ್ಸ್ ಮತ್ತು ಕಮ್ಯೂನಿಕೇಶನ್ಸ್ (COSMIC-2025) ಕುರಿತು IEEE ದ್ವಿತೀಯ ಅಂತಾರಾಷ್ಟ್ರೀಯ ಸಮ್ಮೇಳನವು ನವೆಂಬರ್ 21 ಮತ್ತು 22 ರಂದು ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ನಡೆಯಲಿದೆ ಎಂದು ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಂಟ್ ಕಾಲೇಜಿನ ಡಾ. ಎಸ್. ಎಸ್. ಇಂಜಗನೇರಿ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಸಹ್ಯಾದ್ರಿ ಸದಾ ಸಂಶೋಧನೆ ಮತ್ತು ನವೀನತೆಗೆ ಆದ್ಯತೆ ನೀಡುತ್ತಾ, ವಿವಿಧ ಯೋಜನೆಗಳಾದ ಸಿನರ್ಜಿಯಾ, ಸೋಷಿಯಲ್ ಇನೋವೇಷನ್ ಪ್ರಾಜೆಕ್ಟ್, ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್, ಹಾಗೂ ಪ್ರಮುಖ ಸಮ್ಮೇಳನಗಳ ಆಯೋಜನೆಯನ್ನು ಮಾಡುತ್ತಾ ಬಂದಿದೆ .ಇನೋವೇಷನ್ ಕ್ಷೇತ್ರಗಳ ಪರಿಣಿತರು ಮತ್ತು ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದರು .
COSMIC-2025 ರ ಪ್ರಮುಖ ಉದ್ದೇಶವೆಂದರೆ ಸಂಶೋಧಕರು, ಅಕಾಡೆಮಿಷಿಯನ್ಸ್, ಉದ್ಯಮ ಪರಿಣಿತರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಒಂದೇ ವೇದಿಕೆಯಲ್ಲಿ ಬಹುಶಾಖಾ ಸಂಶೋಧನಾ ಚರ್ಚೆಗಳಲ್ಲಿ ಭಾಗವಹಿಸುವ ಅವಕಾಶ ಒದಗಿಸುವುದಾಗಿದೆ . ಸಮ್ಮೇಳನವು ಮುಖ್ಯ ಭಾಷಣಗಳು, ತಾಂತ್ರಿಕ ಪ್ರಬಂಧ ಮಂಡನೆಗಳು, ಪೋಸ್ಟರ್ ಸೆಷನ್‌ಗಳನ್ನು ಒಳಗೊಂಡಿದ್ದು, ಸಂಶೋಧನಾ ಫಲಿತಾಂಶಗಳ ಹಂಚಿಕೆ ಮತ್ತು ನವೀನ ಪರಿಹಾರಗಳ ಪ್ರಸಾರವನ್ನು ಉತ್ತೇಜಿಸುತ್ತದೆ ಎಂದರು .ಈ ಬಾರಿ ದೇಶದ ವಿವಿಧ ಭಾಗಗಳು ಹಾಗೂ ವಿದೇಶಗಳಿಂದ ಒಟ್ಟು 400 ಪ್ರಬಂಧಗಳು ಸಲ್ಲಿಕೆಯಾಗಿ, ಅವುಗಳಲ್ಲಿ 20% ಪ್ರಬಂಧಗಳನ್ನು ಡಬಲ್ ಬ್ಲೈಂಡ್ ವಿಮರ್ಶೆಯ ನಂತರ ಮಂಡನೆಗೆ ಆಯ್ಕೆ ಮಾಡಲಾಗಿದೆ. ಸುಮಾರು 200ಕ್ಕೂ ಹೆಚ್ಚು ಉದ್ಯಮ ಪರಿಣಿತರು ಮತ್ತು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು .
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ವಿದ್ಯಾಶಂಕರ್ ಎನ್ ಭಾಗವಹಿಸಲಿದ್ದಾರೆ , ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ನ ಶಾಸಕರು ಮತ್ತು ಸಹ್ಯಾದ್ರಿ ಫೌಂಡೇಶನ್ ಅಧ್ಯಕ್ಷರಾದ ಡಾ. ಮಂಜುನಾಥ ಭಂಡಾರಿ ವಹಿಸಲಿದ್ದಾರೆ . ಮುಖ್ಯ ಭಾಷಣಗಾರರಾಗಿ ತಾಂತ್ರಿಕ ನಿಪುಣರಾದ ಡಾ. ಪ್ರಸಂತ್ ಮಿಸ್ರಾ , ಡಾ. ಚೆಂಗಪ್ಪ ಮುಂಜಂಡಿರಾ ಭಾಗವಹಿಸಲಿದ್ದಾರೆ ಈ ಸಂದರ್ಭದಲ್ಲಿ ಗಣ್ಯರು ಉಪಸ್ಥಿಯಲ್ಲಿ ಇರಲಿದ್ದಾರೆ ಎಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಸುಧೀರ್ ಶೆಟ್ಟಿ ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಹಾಗೂ ವಿಭಾಗಾಧ್ಯಕ್ಷರಾದ ಡಾ. ಮುಸ್ತಾಫಾ ಬಸ್ತಿಕೋಡಿ , ಡಾ. ಪುಷ್ಪಲತಾ ಕೆ ಮುಂತಾದವರು ಉಪಸ್ಥಿತರಿದ್ದರು .