ಮಂಗಳೂರಿನ ಚಿನ್ನದ ವ್ಯಾಪರಿಗೆ ವಂಚಿಸಿದ ಅಂತರ್ ರಾಜ್ಯ ವಂಚಕನ ಬಂಧನ: 240 ಗ್ರಾಂ ಚಿನ್ನ ಜಪ್ತಿ.

ಮಂಗಳೂರು: ದಿನಾಂಕ 21.11.2025 ರಂದು ಸಂಜೆ ಉರ್ವಾಸ್ಟೋರ್, ಚಿಲಿಂಬಿ, ಗುಜ್ಜಾಡಿ ಚೆಂಬರ್ಸ್ ನಲ್ಲಿರುವ ಸ್ವರ್ಣ ಜುವೆಲರ್ಸ್ ಅಂಗಡಿಗೆ ಬಂದು ಅರುಣ್ ಎಂದು ಪರಿಚಯ ಮಾಡಿಕೊಂಡಿದ್ದ ವ್ಯಕ್ತಿಯು, ದಿನಾಂಕ: 22-11-2025 ರಂದು ಬಿಜೈ ಕಾಫಿಕಾಡ್ ನಲ್ಲಿರುವ ಅಜಂತ್ ಬಿಸಿನೆಸ್ ಸೆಂಟರ್ ನಲ್ಲಿ ತಾನು ಆಫೀಸ್ ತೆರೆಯಲ್ಲಿದ್ದು ,ಅಲ್ಲಿಗೆ ಬರುವ ಗೆಸ್ಟ್ ಗಳಿಗೆ ಚಿನ್ನದ ಬಿಸ್ಕೆಟ್ ನೀಡಲು ಇದೆ ಆ ಕಾರಣ 10 ಗ್ರಾಂ ತೂಕದ 24 ಚಿನ್ನದ ಬಿಸ್ಕಿಟ್ ಗಳು ಬೇಕು ಎಂದು ಬಿಸ್ಕಿಟ್ ಗಳ ಡಿಸೈಜ್ ಸೆಲೆಕ್ಟ್ ಮಾಡಿ ದಿನಾಂಕ: 22-11-2025 ರಂದು ಮಧ್ಯಾಹ್ನ 12-00 ಗಂಟೆಗೆ ಬಿಜೈ ಕಾಫಿಕಾಡ್ ನಲ್ಲಿರುವ ಅಜಂತ್ ಬಿಸಿನೆಸ್ ಸೆಂಟರ್ ನಲ್ಲಿರುವ ತನ್ನ ಆಫಿಸ್ ತಂದುಕೊಡಲು ತಿಳಿಸಿ ಚಿನ್ನ ದೊರೆತ ಕೂಡಲೇ ಚಿನ್ನದ ಹಣವನ್ನು RTGS ಮಾಡುತ್ತೇನೆಂದು ನಂಬಿಸಿ, ದಿನಾಂಕ: 22-11-2025 ರಂದು ಸ್ವರ್ಣ ಜ್ಯುವೆಲರ್ಸ್ ಸಿಬ್ಬಂದಿ ಚಿನ್ನದ ಬಿಸ್ಕಿಟ್ ಗಳನ್ನು ಕೊಡಲು ಹೋದ ಸಮಯ ಆರೋಪಿಯು ಅಜಂತ ಬಿಸಿನೆಸ್ ಸೆಂಟರ್ ನ 5 ನೇ ಮಹಡಿಯಲ್ಲಿರುವ ಕೆಫೆಟೆರಿಯಾಕ್ಕೆ ಕರೆದುಕೊಂಡು ಹೋಗಿ ಅಲ್ಲಿ ತಲಾ 10 ಗ್ರಾಂ ತೂಕದ 24 ಕ್ಯಾರೇಟ್ 24 ಚಿನ್ನದ ಬಿಸ್ಕಿಟ್ ಗಳನ್ನು ಪಡೆದುಕೊಂಡು ತಾನು 3 ನೇ ಮಹಡಿಯಲ್ಲಿರುವ ಆಫೀಸ್ ನಲ್ಲಿ RTGS ಮಾಡುತ್ತೇನೆಂದು ತಿಳಿಸಿ ಹಣ ಪಾವತಿ ಮಾಡದೇ ವಂಚಿಸಿ ಪರಾರಿಯಾಗಿರುತ್ತಾನೆ. ಸುಮಾರು ರೂ 31,00,000 ಮೌಲ್ಯದ ಚಿನ್ನವನ್ನು ಪಡೆದು ವಂಚಿಸಿದ ಬಗ್ಗೆ ಸ್ವರ್ಣ ಜ್ಯೂವೆಲರ್ಸ್ ಮಾಲಕರಾದ ಅಜಯ್ ರಾಮದಾಸ ನಾಯಕ್ ರವರು ನೀಡಿದಂತೆ ಉರ್ವ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.

  ಈ ಪ್ರಕರಣದಲ್ಲಿ ಭಾಗಿಯಾದ ಅರುಣ್ ಎಂಬಾತನ ಪತ್ತೆ ಬಗ್ಗೆ  ಉರ್ವಾ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳು ತಾಂತ್ರಿಕವಾಗಿ ಮಾಹಿತಿಯನ್ನು ಕಲೆಹಾಕಿ ಪ್ರಕರಣದಲ್ಲಿ ಭಾಗಿಯಾದ ಅರುಣ್ ಎಂಬಾತನು ತಮಿಳುನಾಡಿನ  ಕೊಯಂಬತ್ತೂರು ನಲ್ಲಿರುವ ಮಾಹಿತಿ  ಪಡೆದು  ದಿನಾಂಕ: 26-11-2025 ರಂದು ತಮಿಳುನಾಡಿನ  ರಾಜ್ಯದ  ಕೊಯಂಬತ್ತೂರು,  ಜಿಲ್ಲೆಯ ಪುಲಿಯಕುಲಂ ಎಂಬಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿರುತ್ತಾರೆ. ಆರೋಪಿತ ಮೇಲೆ ತನಿಖೆಯನ್ನು ಮುಂದುವರೆಸಿದಾಗ  ಆರೋಪಿತನ ಹೆಸರು  ಪುಗಲ್ ವಾಸನ್ @ ಪುಗಲ್ ಹಸನ್ @ ಅರುಣ್ ಪ್ರಾಯ: 50 ವರ್ಷ, ತಂದೆ: ಅರುಮುಗಂ ವಾಸ:# 401 ಬಿ ಬ್ಲಾಕ್, 4ನೇ ಮಹಡಿ, ಪದ್ಮ ಕಿರಣ್ ಎನ್‌ಕ್ಲೇವ್, ಸಿಂಗನಲ್ಲೂರು, ಕೊಯಂಬತ್ತೂರು ತಮಿಳುನಾಡು  ಎಂದು ತಿಳಿದು ಬಂದಿರುತ್ತದೆ. ಈತನು ನಕಲಿ  ಹೆಸರುಗಳನ್ನು ಹೇಳಿಕೊಂಡು ವಂಚಿಸುವ ಪ್ರವೃತಿಯುಳ್ಳವಾಗಿರುತ್ತಾನೆ.  ಆರೋಪಿಯಿಂದ ಪ್ರಕರಣಕ್ಕೆ ಸಂಬಂದಿಸಿ  ರೂ 31,04,000/- ಮೌಲ್ಯದ  240 ಗ್ರಾಂ ತೂಕದ 24 ಕ್ಯಾರೆಟ್ ಶುದ್ದತೆಯ ಚಿನ್ನದ ಬಿಸ್ಕಿಟ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.

ಆಪಾದಿತನು ಈ ಹಿಂದೆ ಮಹಾರಾಷ್ಟ್ರದ ಮುಂಬೈ, ತೆಲಂಗಾಣದ ಹೈದ್ರಬಾದ್ , ತಮಿಳುನಾಡಿನ ಚಿತ್ತೋಡ್, ಆಂದ್ರಪ್ರದೇಶದ ತಿರುಪತಿಯಲ್ಲಿ ಇದೇ ತರದ ವಂಚನೆ ಕೃತವನ್ನು ಎಸಗಿರುತ್ತಾನೆ. ಈ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತವೆ.
ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಸುದೀರ್ ಕುಮಾರ್ ರೆಡ್ಡಿ, ಐ.ಪಿ.ಎಸ್. ರವರ ಮಾರ್ಗದರ್ಶನದಂತೆ, ಮಾನ್ಯ ಪೊಲೀಸ್ ಉಪ ಆಯುಕ್ತರುಗಳಾದ ಶ್ರೀ ಮಿಥುನ್ ಹೆಚ್.ಎನ್ (ಕಾ&ಸು) ಮತ್ತು ಶ್ರೀ ರವಿಶಂಕರ್ ( ಅಪರಾಧ ) ರವರ ನಿರ್ದೇಶನದಂತೆ ಹಾಗೂ ಶ್ರೀ ಪ್ರತಾಪ್ ಸಿಂಗ್ ತೋರಟ್, ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ಕೇಂದ್ರ ವಿಭಾಗರವರ ನೇತೃತ್ವದಲ್ಲಿ ಉರ್ವಾ ಪೊಲೀಸ್ ಠಾಣೆಯ ನಿರೀಕ್ಷಕರಾದ ಶ್ಯಾಮ್ ಸುಂಧರ್ ಹೆಚ್.ಎಮ್ , ಪಿಎಸ್‌ಐ ಗುರಪ್ಪ ಕಾಂತಿ, ಪಿಎಸ್‌ಐ ಎಲ್.ಮಂಜುಳಾ, ಎಎಸ್‌ಐ ವಿನಯ್ ಕುಮಾರ್ ಮತ್ತು ಸಿಬ್ಬಂದಿಗಳಾದ ಅನಿಲ್, ಭಾಸ್ಕರ್, ಹರೀಶ್, ವೆಂಕಟೇಶ್, ಚಂದ್ರಹಾಸ, ಯೆಲ್ಲಾಲಿಂಗರವರು ಆರೋಪಿ ಪತ್ತೆಗೆ ಶ್ರಮಿಸಿರುತ್ತಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!