ಶ್ರೀ ಕೃಷ್ಣ ಶಿವಕೃಪಾ ನೇತೃತ್ವದ ಭಾರತಾಂಭ ತಂಡಕ್ಕೆ ಪ್ರಥಮ ವಾರ್ಷಿಕ- ನಾಳೆ ಮಧೂರಿನಲ್ಲಿ ಸಂಭ್ರಮಾಚರಣೆ

ಮಂಜೇಶ್ವರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗತವೈಭವದ 100 ನೇ ವರ್ಷಾಚರಣೆ ಮಾಡುತ್ತಿರುವ ಸುಸಂದರ್ಭದಲ್ಲಿ “ದೇಶಪ್ರೇಮ, ದೇವ ಭಕ್ತಿಸನಾತನ ಧರ್ಮ” ಎಂಬ ಧೈಯದೊಂದಿಗೆ ಧಾರ್ಮಿಕ ಸಾಮಾಜಿಕ ಮುಂದಾಳು ಶ್ರೀ ಕೃಷ್ಣ ಶಿವಕೃಪಾ ಇವರ ನೇತೃತ್ವದಲ್ಲಿ ಭಾರತಾ೦ಬ ತ೦ಡ ಪ್ರಾರಂಭಿಸಲಾಗಿತ್ತು. ಇದೀಗ ಒಂದನೇ ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ.

ಹಲವಾರು ತೀರ್ಥ ಕ್ಷೇತ್ರಗಳಲ್ಲಿ ಹರಿನಾಮ ಸಂಕೀರ್ತನೆ ಮಾಡಿದ್ದಲ್ಲದೆ ತಂಡದ ಹೆಸರಿನಲ್ಲಿ ವಿವಿಧ ರೀತಿಯ ಸೇವೆಗಳನ್ನು ನಡೆಸುತ್ತಾ ಬರಲಾಗಿದೆ. ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ನ.30ಕ್ಕೆ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ತಂಡದ ವತಿಯಿಂದ ಭಜನಾ ಸಂಕೀರ್ತನೆ ಹಾಗೂ ಸಿದ್ಧಿವಿನಾಯಕ ದೇವರಿಗೆ ಸಹಸ್ರ ಅಪ್ಪದ ಸೇವೆ ಮತ್ತು ಮದನಂತೇಶ್ವರ ದೇವರಿಗೆ ಕಾರ್ತಿಕ ಪೂಜಾ ಸೇವೆ ಜರಗಲಿದೆ.

ದೇವ ಭಕ್ತಿ ಮತ್ತು ದೇಶ ಪ್ರೇಮದ ಅಭಿರುಚಿ ಇರುವ ಸಂಕೀರ್ತನಾ ಪ್ರಿಯರು ಮತ್ತು ದೇಶಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!