ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯ ಹಿಂಬದ್ದಿಗೆ ಅತ್ತಾವರ ಮತ್ತು ಹಂಪನಕಟ್ಟೆಯ ನಡುವೆ ಸಂಪರ್ಕಿಸುವ ರಸ್ತೆ ಇದ್ದು ಈ ರಸ್ತೆಯ ಬದಿಗೆ ನೋ ಪಾರ್ಕಿಂಗ್ ಎಂದು ಸೂಚನಾ ಫಲಕವನ್ನು ಹಾಕಲಾಗಿದೆ . ಆದರೆ ನೋ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ತುರ್ತು ವಾಹನಗಳ ಹೊರತಾಗಿ ರಿಕ್ಷಾ, ಕಾರುಗಳನ್ನು ಪಾರ್ಕಿಂಗ್ ಮಾಡಲಾಗಿದೆ.
ಇದರಿಂದ ಆ ಮಾರ್ಗವಾಗಿ ಸಂಚಾರ ಮಾಡುವ ಇತರೇ ವಾಹನಗಳಿಗೆ ಮತ್ತು ಆ ಹಾದಿಯಾಗಿ ನಡೆದುಕೊಂಡು ಹೋಗುವ ಪ್ರಯಾಣಿಕರಿಗೆ ತೊಂದರೆಯನ್ನು ನೀಡುತ್ತದೆ . ನೋ ಪಾರ್ಕಿಂಗ್ ಸ್ಥಳದಲ್ಲಿ ಈ ರೀತಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ಸರಿಯಾದ ಕ್ರಮವನ್ನು ಸರಕಾರ ಕೈಗೊಳ್ಳಬೇಕು . ಸ್ಥಳೀಯ ರಿಕ್ಷಾ ಚಾಲಕರಿಗೆ ಆಟೋ ಸ್ಟಾಂಡ್ ಗಳು ಇದ್ದರೂ ಕೂಡ ಅವರು ಅಲ್ಲಿಗೆ ಹೋಗದೆ ಇಲ್ಲಿಯೇ ರಿಕ್ಷಾವನ್ನು ಇಡುತ್ತಾರೆ . ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಕೊಳ್ಳಬೇಕು.