ಮಂಗಳೂರು ಬೋಳಾರ ಶ್ರೀ ಮಂಗಳಾದೇವಿ ದೇವಸ್ಥಾನ ಶ್ರೀ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರ ಇದರ 12ನೇ ವಾರ್ಷಿಕೋತ್ಸವ ನಿರ್ದೇಶಕ ಜಯಕರ ಪಂಡಿತ್ ಬಜಾಲ್ ನಿರ್ದೇಶನದಲ್ಲಿ, ಸಭೆ ಸನ್ಮಾನ ಕಾರ್ಯಕ್ರಮ, ದಕ್ಷ ಯಜ್ಞ, ಗಿರಿಜಾ ಕಲ್ಯಾಣ, ಕಾರ್ತಿಕೇಯ ಕಲ್ಯಾಣ, ಯಕ್ಷಗಾನ ಪ್ರದರ್ಶನದೊಂದಿಗೆ ಶ್ರೀಮಂಗಳದೇವಿ ದೇವಸ್ಥಾನದ ವಠಾರದಲ್ಲಿ ನಡೆಯಿತು.ವೀರನಗರ ಪೆರ್ಲ ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನದ ಅಧ್ಯಕ್ಷ, ಉದ್ಯಮಿ, ಕೇಶವ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಯಕ್ಷಗಾನ ಕಲಾವಿದ, ಉದ್ಯಮಿ, ಬೋಳಾರ ಸುರಭಿ ಏಜೆನ್ಸಿ ಮಾಲಕ ಶಿವಪ್ರಸಾದ್ ಪ್ರಭು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಂಘಟನೆಯನ್ನು ಕಟ್ಟುವುದು, ಬೆಳೆಸುವುದು ಅಷ್ಟು ಸುಲಭದ ಕೆಲಸ ಅಲ್ಲ, ಅದರಲ್ಲೂ ಚಿಕ್ಕ ಮಕ್ಕಳಿಗೆ ಯಕ್ಷಗಾನ ಕಲಿಸುವುದು ತುಂಬಾ ಪರಿಶ್ರಮದ ಕೆಲಸ, ಆರಾಧನಾ ಕಲೆಯಾದ ಯಕ್ಷಗಾನ ಕ್ಷೇತ್ರಕ್ಕೆ ಜಯಕರ್ ಪಂಡಿತ್ ಮತ್ತು ಅವರ ಬಳಗದವರು ಅನೇಕ ಕೊಡುಗೆಗಳನ್ನು, ಅದ್ಭುತಗಳನ್ನು ನೀಡಿದ್ದಾರೆ ಎಂದು ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರದ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಹಿಮ್ಮೇಳ ಕಲಾವಿದ ಅನಿರುದ್ಧ್ ಅತ್ತಾವರ ಅವರಿಗೆ ದಿವಂಗತ ಚಂದ್ರಶೇಖರ ಬಲ್ಯಾಯ ಸಂಸ್ಮರಣಾ ಪ್ರಶಸ್ತಿ, ಯಕ್ಷಕಲಾ ಪ್ರಚಾರಕ ವೆಂಕಟೇಶ್ ಬೋಳಿಯಾಲರಿಗೆ ಗೌರವ ಸನ್ಮಾನ, ಭಾಗವತರು ದಯಾನಂದ ಕೋಡಿಕಲ್, ಕೇಂದ್ರದ ನಿರ್ದೇಶಕ ಯಕ್ಷನಾಟ್ಯ ಗುರು ಜಯಕರ ಪಂಡಿತ್,ಹಿಮ್ಮೇಳ ಕಲಾವಿದರು ರೋಹಿತ್ ಉಚ್ಚಿಲ್, ಶ್ರೀಮತಿ ಶ್ರೇಯಾ ರೋಹಿತ್ ಉಚ್ಚಿಲ್ ದಂಪತಿಗಳಿಗೆ ಗುರುವಂದನ ಗೌರವ ನೀಡಿ ಸನ್ಮಾನಿಸಿದರು.ಎಸ್, ಎಸ್. ಎಲ್. ಸಿ., ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಮಂಗಳೂರು ಅಳಪೆ ಶ್ರೀ ಪರಂಜ್ಯೋತಿ ಭಜನಾ ಮಂಡಳಿಯ ಅಧ್ಯಕ್ಷ, ವಕೀಲ ದಿನಕರ್ ಶೆಟ್ಟಿ, ಮಂಗಳೂರು ಕೋಡಿಯಾಲ್ ಬೈಲ್ ಶಾರದಾ ವಿದ್ಯಾಲಯದ ಪ್ರಾಂಶು¥ಲರು ದಯಾನಂದ ಕಟೀಲ್, ಜಪ್ಪಿನಮೊಗರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾಗೇಂದ್ರ ಕುಮಾರ್ ಪೊಸಕೋರಲ್ ವಾಹಿನಿ ನಿರ್ದೇಶಕ ವಿದ್ಯಾಧರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶ್ರೀ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರದ 12ನೇ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದರು.
ಯಕ್ಷಗಾನ ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಜಯಕರ ಪಂಡಿತ್ ಬಜಾಲ್, ಅಧ್ಯಕ್ಷ ಭಾನುಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕೇಂದ್ರದ ವಿದ್ಯಾರ್ಥಿನಿ ಪ್ರೀತಿ ಪ್ರಾರ್ಥನೆಗೈದರು. ಕಾರ್ಯದರ್ಶಿ ಸಾಂತಪ್ಪ ಯು. ಸ್ವಾಗತಿಸಿ ಪ್ರಸ್ತಾವನೆಗೆದರು. ಗುರುಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಶ್ರೀಮತಿ ಮಲ್ಲಿಕಾ ಭಾನುಪ್ರಕಾಶ್ ನಿರೂಪಿಸಿದರು. ಅಧ್ಯಾಪಕ ಎಚ್. ಶಿವಕುಮಾರ್ ವಂದಿಸಿದರು.